ಕರಾವಳಿ

ಬಿಜೆಪಿ ಭರ್ಜರಿ ಗೆಲುವು ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

Pinterest LinkedIn Tumblr

ಮಂಗಳೂರು, ಡಿಸೆಂಬರ್.09: ದೇಶದ ಗಮನ ಸೆಳೆದಿದ್ದ ಕರ್ನಾಟಕ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ (ಸಂಭ್ರಮ) ಆಚರಿಸಿದರು.

ವಿಜಯೋತ್ಸವ ಸಂಭ್ರಮದಲ್ಲಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ಪಕ್ಷದ ಪ್ರಮುಖರಾದ ರವೀಶ್ ಮಿಜಾರ್, ಭಾಸ್ಕರ್ ಚಂದ್ರ ಶೆಟ್ಟಿ, ನಿತಿನ್ ಕುಮಾರ್, ರಾಜ್ ಗೋಪಾಲ್ ರೈ, ಸಂಜಯ್ ಪ್ರಭು, ಗುರುಚರಣ್, ಮನಪಾ ಸದಸ್ಯರು ಹಾಗೂ ಹಾಗೂ ಮಹಿಳಾ ಘಟಕದ ಪ್ರಮುಖರು ಪಾಲ್ಗೊಂಡಿದ್ದರು.

15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರವು ಸ್ಪಷ್ಟ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳ ಗಡಿಯನ್ನು ದಾಟಿದೆ. ಅನರ್ಹತೆಯ ಹಣೆಪಟ್ಟಿಯೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದ ಬಿಜೆಪಿ ಅಭ್ಯರ್ಥಿಗಳ ಪೈಕಿ ಎಂಟಿಬಿ ನಾಗರಾಜ್ ಹಾಗೂ ಎಚ್.ವಿಶ್ವನಾಥ್ ಹೊರತುಪಡಿಸಿ ಎಲ್ಲರಿಗೂ ಜನತಾ ನ್ಯಾಯಾಲಯದಲ್ಲಿ ಮನ್ನಣೆ ಸಿಕ್ಕಿದೆ.

ವಿಧಾನಸಭೆಯಲ್ಲಿ ಪಕ್ಷೇತರ ಸದಸ್ಯರೊಬ್ಬರ ಬೆಂಬಲದೊಂದಿಗೆ 107 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ, ಇದೀಗ ಉಪ ಚುನಾವಣೆಯ ಫಲಿತಾಂಶದ ಬಳಿಕ ತನ್ನ ಸಂಖ್ಯಾಬಲವನ್ನು 119ಕ್ಕೆ ವೃದ್ಧಿಸಿಕೊಂಡಿದೆ.

ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು – ಎಷ್ಟು ಅಂತರ – ಇಲ್ಲಿದೆ ವಿವರ

ಕೆ.ಆರ್.ಪುರ: ಭೈರತಿಬಸವರಾಜ(ಬಿಜೆಪಿ)-1,39,879, ಎಂ.ನಾರಾಯಣಸ್ವಾಮಿ(ಕಾಂಗ್ರೆಸ್)- 76,436, ಗೆಲುವಿನ ಅಂತರ- 63,443

ಅಥಣಿ: ಮಹೇಶ್ ಕುಮಟಳ್ಳಿ(ಬಿಜೆಪಿ)-99,203, ಗಜಾನನ ಮಂಗಸೂಳಿ(ಕಾಂಗ್ರೆಸ್)-59,214, ಗೆಲುವಿನ ಅಂತರ-39,989.

ಶಿವಾಜಿನಗರ: ರಿಝ್ವಾನ್ ಅರ್ಶದ್(ಕಾಂಗ್ರೆಸ್)-49,890, ಎಂ.ಸರವಣ(ಬಿಜೆಪಿ)-36,369, ಗೆಲುವಿನ ಅಂತರ-13,521.

ಕಾಗವಾಡ: ಶ್ರೀಮಂತ್‌ ಪಾಟೀಲ್(ಬಿಜೆಪಿ)-76,952, ರಾಜು ಕಾಗೆ(ಕಾಂಗ್ರೆಸ್)-58,395, ಗೆಲುವಿನ ಅಂತರ-18,557.

ಗೋಕಾಕ್: ರಮೇಶ್ ಜಾರಕಿಹೊಳಿ(ಬಿಜೆಪಿ)-87,450, ಲಖನ್ ಜಾರಕಿಹೊಳಿ(ಕಾಂಗ್ರೆಸ್)-58,444, ಗೆಲುವಿನ ಅಂತರ-29,006.

ಯಲ್ಲಾಪುರ: ಅರಬೈಲು ಶಿವರಾಮ್ ಹೆಬ್ಬಾರ್(ಬಿಜೆಪಿ)-80,442, ಭೀಮಾ ನಾಯ್ಕ(ಕಾಂಗ್ರೆಸ್)-49,034, ಗೆಲುವಿನ ಅಂತರ-31,408.

ಹಿರೇಕೆರೂರು: ಬಿ.ಸಿ.ಪಾಟೀಲ್(ಬಿಜೆಪಿ)-85,562, ಬಿ.ಎಚ್.ಬನ್ನಿಕೋಡ್(ಕಾಂಗ್ರೆಸ್)-56,495, ಗೆಲುವಿನ ಅಂತರ-29,067.

ರಾಣೆಬೆನ್ನೂರು: ಅರುಣ್‌ ಕುಮಾರ್ ಗೊತ್ತೂರ್(ಬಿಜೆಪಿ)-95,438, ಕೆ.ಬಿ.ಕೋಳಿವಾಡ್(ಕಾಂಗ್ರೆಸ್)-72,216, ಗೆಲುವಿನ ಅಂತರ-23,222.

ವಿಜಯನಗರ: ಆನಂದ್‌ ಸಿಂಗ್(ಬಿಜೆಪಿ)-85,477, ವಿ.ವೈ.ಘೋರ್ಪಡೆ (ಕಾಂಗ್ರೆಸ್)-55,352, ಗೆಲುವಿನ ಅಂತರ-30,125.

ಚಿಕ್ಕಬಳ್ಳಾಪುರ: ಡಾ.ಕೆ.ಸುಧಾಕರ್(ಬಿಜೆಪಿ)-84,389, ಎಂ.ಆಂಜನಪ್ಪ (ಕಾಂಗ್ರೆಸ್)-49,588, ಗೆಲುವಿನ ಅಂತರ-34,801.

ಯಶವಂತಪುರ: ಎಸ್.ಟಿ.ಸೋಮಶೇಖರ್(ಬಿಜೆಪಿ)-1,44,722, ಟಿ.ಎನ್.ಜವರಾಯಿಗೌಡ(ಜೆಡಿಎಸ್)-1,17,023, ಗೆಲುವಿನ ಅಂತರ-27,699.

ಮಹಾಲಕ್ಷ್ಮಿ ಲೇಔಟ್: ಕೆ.ಗೋಪಾಲಯ್ಯ-85,889, ಎಂ.ಶಿವರಾಜು (ಕಾಂಗ್ರೆಸ್)-31,503, ಗೆಲುವಿನ ಅಂತರ-54,386.

ಹೊಸಕೋಟೆ: ಶರತ್ ಬಚ್ಚೇಗೌಡ(ಪಕ್ಷೇತರ)-81,671, ಎಂಟಿಬಿ ನಾಗರಾಜ್(ಬಿಜೆಪಿ)-70,185, ಗೆಲುವಿನ ಅಂತರ-11,486.

ಕೆ.ಆರ್.ಪೇಟೆ: ನಾರಾಯಣಗೌಡ(ಬಿಜೆಪಿ)-66,094, ಬಿ.ಎಲ್.ದೇವರಾಜ್(ಜೆಡಿಎಸ್)-56,363, ಗೆಲುವಿನ ಅಂತರ-9,731.

ಹುಣಸೂರು: ಎಚ್.ಪಿ.ಮಂಜುನಾಥ್(ಕಾಂಗ್ರೆಸ್)-92,725, ಎಚ್.ವಿಶ್ವನಾಥ್(ಬಿಜೆಪಿ)-52,998, ಗೆಲುವಿನ ಅಂತರ-39,727.

Comments are closed.