ಕರಾವಳಿ

ಅಖಿಲ ಭಾರತ ಮಟ್ಟಕ್ಕೆ ಮಂಗಳೂರು ವಿ.ವಿ ಪುರುಷರ ಹ್ಯಾಂಡ್‍ಬಾಲ್ ತಂಡ

Pinterest LinkedIn Tumblr

ಮಂಗಳೂರು  : ಡಿಸೆಂಬರ್ 21 ರಿಂದ 24ರವರೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಪುರುಷರ ಹ್ಯಾಂಡ್‍ಬಾಲ್ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡ ಭಾಗವಹಿಸಿ ಜಯಶಾಲಿಯಾಗಿರುತ್ತದೆ.

ಮೊದಲ ಪಂದ್ಯದಲ್ಲಿ ಗೀತಮ್ ವಿಶ್ವವಿದ್ಯಾನಿಲಯದ ಎದುರು 28-17, ಎರಡನೇ ಪಂದ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಢದ ಎದುರು 28-8, ಮೂರನೇ ಪಂದ್ಯದಲ್ಲಿ ಕಾಕತೀಯ ವಿಶ್ವವಿದ್ಯಾನಿಲಯದ ಎದುರು 23-17 ಅಂತರದಲ್ಲಿ ಜಯಗಳಿಸಿದೆ.

ಮೊದಲ ಫ್ರಿ. ಕ್ವಾರ್ಟರ್ ಫೈನಲ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಭಾರತೀಯಾರ್ ವಿಶ್ವವಿದ್ಯಾನಿಲಯದ ಎದುರು 20-21 ಅಂತರಗಳಿಂದ ಜಯಿಸಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಂಡಿದೆ.

ನಂತರ ನಡೆದ ಲೀಗ್ ಪಂದ್ಯಾವಳಿಗಳಲ್ಲಿ ಕೃಷ್ಣ ವಿಶ್ವವಿದ್ಯಾನಿಲಯದ ಎದುರು 31-24, ಎರಡನೇ ಲೀಗ್ ಪಂದ್ಯದಲ್ಲಿ ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದ ಎದುರು 25-34, ಮೂರನೇ ಲೀಗ್ ಪಂದ್ಯಾವಳಿಯಲ್ಲಿ ಕಾರ್ಪಗಮ್ ಅಕಾಡೆಮಿ ಆಫ್ ಹೈಯರ್ ಎಡುಕೇಶನ್ ಎದುರು 24-34 ಗೋಲುಗಳಿಂದ ತೃತೀಯ ಸ್ಥಾನವನ್ನು ಮಂಗಳೂರು ವಿಶ್ವವಿದ್ಯಾನಿಲಯವು ಪಡೆದಿರುತ್ತದೆ.

ತಂಡದ ತರಬೇತುದಾರರಾಗಿ ತಂಡದೊಂದಿಗೆ ರಾಜೇಂದ್ರ ಬಾಬು ಹಾಗೂ ವವಸ್ಥಾಪಕರಾಗಿ ಸುದೀನ ಇವರು ತೆರಳಿರುತ್ತಾರೆ.

ತಂಡದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು : ವೆಂಕಟರಾಮ್ ವಿ, ಮಯೂರು ಡಿ.ಆರ್., ಜಾಕೀರ್ ಹುಸೇನ್, ಸುಗಾನ್ ಎಮ್.ಸಿ., ತರುಣ್ ಎಸ್. ದರ್ಶನ್ ಸಿ.ಪಿ., ಕಿರಣ್ ಆರ್., ಮಂಜುನಾಥ್ ಎಚ್. ಇ., ಅಶ್ವತ್ ಭಂಡಾರಿ, ವಿಶ್ವಾಸ್ ಜಿ.ಆರ್., ಗಣೇಶ್ ಕೆ.ಎಸ್. ಸಂತೋಷ್ ಕುಮಾರ್ ಎಮ್., ಪೂಜಾರಿ ಸೂರಜ್ ರವೀಂದ್ರ, ಹರೀಶ್ ದೇವರೆಡ್ಡಿ, ಸಾಕ್ಷತ್ ಎಚ್. ಎಸ್., ಶ್ರೀಷ ಕೆ.ಎಸ್.

Comments are closed.