ಕರಾವಳಿ

ಪುರುಷರ ಖೋ-ಖೋ ಪಂದ್ಯಾವಳಿ : ಮಂಗಳೂರು ವಿ.ವಿಗೆ ಬೆಳ್ಳಿಯ ಪದಕ

Pinterest LinkedIn Tumblr

ಮಂಗಳೂರು ಜನವರಿ 03 : ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ ಇದರ ಆಶ್ರಯದಲ್ಲಿ ಡಿಸೆಂಬರ್ 28 ರಿಂದ 30 ರವರೆಗೆ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡ ಭಾಗವಹಿಸಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಮೊದಲನೇ ಲೀಗ್ ಉತ್ಕಾಲ್ ವಿಶ್ವವಿದ್ಯಾಲಯದ ಎದುರು 15-9 ಇನ್ನಿಂಗ್ಸ್, ಎರಡನೇ ಲೀಗ್ ಲವ್ಲಿ ಪ್ರೋಫೆಷನಲ್ ವಿವಿ ಎದುರು 16-9 ಇನ್ನಿಂಗ್ಸ್, ಮೂರನೇ ಲೀಗ್ ಪುಣೆ ವಿಶ್ವವಿದ್ಯಾನಿಲಯದ ವಿರುದ್ಧ 21-15, ಕ್ವಾರ್ಟರ್ ಫೈನಲ್‍ನಲ್ಲಿ ಮುಂಬೈ ವಿವಿ ಎದುರು 10-7, ಸೆಮಿಫನಲ್‍ನಲ್ಲಿ ಶಿವಾಜಿ ವಿಶ್ವವಿದ್ಯಾನಿಲಯದ ಎದುರು 12-13 ಅಂಕ ಗಳಿಸಿ ಫೈನಲ್‍ನಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಶಿವಮೊಗ್ಗದ ಎದುರು 16-13 ಅಂಕಗಳಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ತಂಡದ ತರಬೇತುದಾರರಾಗಿ ಪ್ರದೀಪ್ ಎಸ್. ಹಾಗೂ ವ್ಯವಸ್ಥಾಪಕರಾಗಿ ಹರಿಪ್ರಸಾದ್ ಆಳ್ವ ಇದ್ದರು. ತಂಡದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು : ಹೃತಿಕ್, ಮನು ವಿ, ಶಿವಣ್ಣ ಎಸ್, ಮಹೇಶ ಪಿ, ಧೀರಜ್, ಮರಿಯಪ್ಪ, ವಿಜಯಪಾಂಡೆ ಎಸ್.ಆರ್, ಆಕಾಶ್ ಎಸ್., ಕೆ.ಪಿ. ತರಂಗ, ಜಯನಂದ ವಿ.ಎಸ್., ಕೃಷ್ಣಪ್ರಸಾದ್ ಕಶ್ಯಪ್ ಎನ್., ಹಂಸರಾಜ್ ಡಿ.ಎಮ್.

Comments are closed.