ಕರಾವಳಿ

ಉಡುಪಿ ಜಿಲ್ಲೆಯ ನೂತನ ಎಸ್ಪಿಯಾಗಿ ಎನ್. ವಿಷ್ಣುವರ್ಧನ್ ಅಧಿಕಾರ ಸ್ವೀಕಾರ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎನ್. ವಿಷ್ಣುವರ್ಧನ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಸದ್ಯ ಅಧಿಕಾರ ವಹಿಸಿಕೊಂಡ ಎಸ್ಪಿ ‌ವಿಷ್ಣುವರ್ಧನ್ ಅವರು ಮೂರು ವರ್ಷಗಳ ಹಿಂದೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಒಂದೂವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಆ ಮೊದಲು ಮಂಗಳೂರಿನಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಉಡುಪಿಯಲ್ಲಿನ ವರ್ಹಾವಣೆಗೊಂಡು ಬಳಿಕ ಮೈಸೂರು ಎಸ್ಪಿಯಾಗಿ ವರ್ಗಾವಣೆಗೊಂಡಿದ್ದರು.

ನಿರ್ಗಮನ ಎಸ್ಪಿ ನಿಶಾ ಜೇಮ್ಸ್ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಳಿಸಿ ಸರಕಾರ ಡಿ.31ರಂದು ಆದೇಶ ಹೊರಡಿಸಿತ್ತು. ತದನಂತರ ಅಕ್ಷಯ್ ಹಾಕೆ ಮಚ್ಚಿಂದ್ರ ಅವರಿಗೆ ಭಡ್ತಿ ನೀಡಿ ಉಡುಪಿ ಜಿಲ್ಲೆಯ ನೂತನ ಎಸ್ಪಿಯಾಗಿ ಆದೇಶಿಸಿತ್ತು. ಆದರೆ ಮುಂದಿನ ಬೆಳವಣಿಗೆಯಲ್ಲಿ ಒಂದೇ ದಿನದಲ್ಲಿ ವಿಷ್ಣುವರ್ಧನ್ ಅವರನ್ನು ಎಸ್ಪಿ ಆಗಿ ವರ್ಗಾಯಿಸಲಾಗಿತ್ತು.

Comments are closed.