ಮಂಗಳೂರು,, ಜನವರಿ.15: ಕೇಂದ್ರ ಸರಕಾರವು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ‘ದಿ ಮುಸ್ಲಿಂ ಸೆಂಟ್ರಲ್ ಕಮಿಟಿ’ಯ ನೇತೃತ್ವದಲ್ಲಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಇಂದು (ಜ.15) ಅಪರಾಹ್ನ 2:30ಕ್ಕೆ ನಗರದ ಅಡ್ಯಾರ್ ಕಣ್ಣೂರು ರಾಷ್ಟ್ರೀಯ ಹೆದ್ದಾರಿ ಬಳಿ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯ ವರೆಗೆ ವಾಹನ ಸಂಚಾರ ಮಾರ್ಪಾಟು ಮಾಡಲಾಗಿದೆ.
ಉಡುಪಿಯಿಂದ ಬೆಂಗಳೂರು ಕಡೆಗೆ ಸಾಗುವ ವಾಹನಗಳು ಪಡುಬಿದ್ರಿಯಲ್ಲಿ ತಿರುವು ಪಡೆದು ಕಾರ್ಕಳ-ಧರ್ಮಸ್ಥಳ- ಶಿರಾಡಿ ಘಾಟಿ ರಸ್ತೆಯಾಗಿ ಸಂಚರಿಸಬೇಕು. ಬೆಂಗಳೂರಿನಿಂದ ಮಂಗಳೂರಿಗೆ ಬರುವ ವಾಹನಗಳು ಮೆಲ್ಕಾರ್-ಬಿ.ಸಿ. ರೋಡ್ ವಯಾ ಕೊಣಾಜೆ- ತೊಕ್ಕೊಟ್ಟು-ಮಂಗಳೂರು ರಸ್ತೆಯಾಗಿ ಸಂಚರಿಸಬೇಕು.
ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಾಗುವ ವಾಹನಗಳು ನಂತೂರು-ಪಂಪ್‌ವೆಲ್- ತೊಕ್ಕೊಟ್ಟು-ಕೊಣಾಜೆ- ಬಿ.ಸಿ.ರೋಡ್ ಮಾರ್ಗವಾಗಿ ಸಂಚರಿಸಬೇಕು. ಬಿ.ಸಿ. ರೋಡ್‌ನಿಂದ ಮಂಗಳೂರು ಕಡೆಗೆ ಸಾಗುವ ವಾಹನಗಳು ಪೊಳಲಿ ಕೈಕಂಬ ಮಾರ್ಗದಲ್ಲಿ ಸಂಚರಿಸಬೇಕು.
ಸಮಾವೇಶಕ್ಕೆ ಆಗಮಿಸುವವರಿಗೆ ವಾಹನ ಪಾರ್ಕಿಂಗ್ ಸ್ಥಳ :
ಮಂಗಳೂರಿನಿಂದ ದ್ವಿಚಕ್ರ ವಾಹನಗಳಲ್ಲಿ ಆಗಮಿಸುವವರಿಗೆ ಜಾಗ್ವಾರ್ ಶೋರೂಂ ಎದುರಿನ ಮೈದಾನ./ ಮಂಗಳೂರಿನಿಂದ ಬರುವ ಎಲ್ಲ ಕಾರು ಮತ್ತು ಇತರ ವಾಹನಗಳಿಗೆ ಸೀಝರ್ ಬೀಡಿ ಮೈದಾನ/ ಮಂಗಳೂರು ಮತ್ತು ಬಿ.ಸಿ. ರೋಡ್ ಕಡೆಯಿಂದ ಬರುವ ಬಸ್‌ಗಳಿಗೆ ಮೋತಿಶ್ಯಾಂ ಮೈದಾನ. / ಬಿ.ಸಿ. ರೋಡ್ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಕಂಬ್ಳಿ ಪಾರ್ಕಿಂಗ್ ಮೈದಾನ / ಬಿ.ಸಿ. ರೋಡ್ ಕಡೆಯಿಂದ ಬರುವ ಎಲ್ಲ ಕಾರು ಮತ್ತು ಇತರ ವಾಹನಗಳಿಗೆ ಅಡ್ಯಾರ್ ಕಟ್ಟೆ ಜುಮ್ಮಾ ಮಸೀದಿ ಮೈದಾನ / ಎಲ್ಲ ಪೊಲೀಸ್-ತುರ್ತು ಸೇವೆಗಳ ವಾಹನಗಳಿಗೆ ವೆಲ್‌ರಿಂಗ್ ಪಾರ್ಕಿಂಗ್ ಮತ್ತು ಶಂಕರ್ ವಿಠಲ್ ಪಾರ್ಕಿಂಗ್ ಸ್ಥಳ ವ್ಯವಸ್ಥೆ ಮಾಡಲಾಗಿದೆ.
Comments are closed.