ಮಂಗಳೂರು ಜನವರಿ 17 : ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಡೆಯುವ ಕರಾವಳಿ ಉತ್ಸವದ ಅಂಗವಾಗಿ ಜನವರಿ 17 ರಂದು ಸಂಜೆ 6.30 ರಿಂದ 8 ಗಂಟೆಯ ತನಕ ಕರಾವಳಿ ಉತ್ಸವ ಮೈದಾನದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಂಕಣಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.
ಸಂಜೆ 6.30 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ರೋಯಕ್ಯಾಸ್ತೆಲಿನೊ, ಎಸ್.ಎಲ್.ಶೇಟ್ ಜ್ಯುವೆಲ್ಸರ್ಸ್ ಡೈಮಂಡ್ ಹೌಸ್ ನ ಪ್ರಶಾಂತ್ ಶೇಟ್, ಹನುಮಂತ ಕಾಮತ್, ಕೊಡಿಯಾಲ್ ಖಬರ್ ಸಂಪಾದಕ ವೆಂಕಟೇಶ್ ಬಾಳಿಗಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
6.45 ಗಂಟೆಗೆ ಶಾಂತಿ ಶೆಣೈ ತಂಡದಿಂದ ಕೊಂಕಣಿ ಸಂಗೀತ ಸಂಜೆ, 7.10 ಗಂಟೆಗೆ ಐರಿನ್ ರೆಬೆಲ್ಲೊ ತಂಡದಿಂದ ಕೊಂಕಣಿ ಬೈಲಾ, ಸಾಂಪ್ರದಾಯಕ ಹಾಡು ಕಾರ್ಯಕ್ರಮ, 7.35 ಗಂಟೆಗೆ ಪಲ್ಲವಿ ಕಾರ್ಕಳ ತಂಡದಿಂದ ಯೆಯಾ ಹಾಸೂಂಯಾ ಕೊಂಕಣಿ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಕೊಂಕಣಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇವರ ಪ್ರಕಟಣೆ ತಿಳಿಸಿದೆ.
Comments are closed.