ಮಂಗಳೂರು : ತುಳುನಾಡಿನ ಬಹುತ್ವದ ಸಂಸ್ಕೃತಿಯು ಸಾಹಿತ್ಯ ಸಮ್ಮೇಳನದ ಮೂಲಕ ಅನಾವರಣಗೊಳ್ಳಲಿ ಎಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಹೇಳಿದರು.
ಜನವರಿ 29ರಂದು ಸಂತಆಗ್ನೇಸ್‌ಕಾಲೇಜಿನಲ್ಲಿಜರಗಲಿರುವ ಮಂಗಳೂರು ತಾಲೂಕುಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮುಖ್ಯವಾಗಿ ವಿದ್ಯಾರ್ಥಿಗಳು ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಹೆಚ್ಚು ಒಲವನ್ನುತೋರಿಸಬೇಕು. ಈ ನೆಲೆಯಲ್ಲಿತಾಲೂಕುಸಾಹಿತ್ಯ ಸಮ್ಮೇಳನವು ಪರಿಣಾಮಕಾರಿಯಾಗಿಯಶಸ್ಸನ್ನುಕಾಣುವಂತಾಗಲೆಂದರು.
ಈ ಸಂದರ್ಭಆಗ್ನೇಸ್‌ಕಾಲೇಜಿನ ಪ್ರಾಂಶುಪಾಲೆ ಸಿ| ಡಾ| ಎಂ. ಜೆಸ್ವೀನಾ ಎ.ಸಿ., ಸಂತಆಗ್ನೇಸ್‌ಕಾಲೇಜು ಕುಲಸಚಿವರಾದ ಪ್ರೊ. ಚಾರ್ಲ್ಸ್ ಸಿ. ಪಾಯಸ್, ಪೊಳಲಿ ನಿತ್ಯಾನಂದಕಾರಂತ, ಡಾ. ಪ್ರಕಾಶಚಂದ್ರ ಶಿಶಿಲ,ಡಾ. ಸಂಪೂರ್ಣಾನಂದಬಳ್ಕೂರು, ಡಾ. ಉದಯಕುಮಾರ್, ಪ್ರೊ. ಚಂದ್ರ ಮೋಹನ್, ಡಾ. ಶೈಲಜಾ ಕೆ,ಕನ್ನಡ ಸಾಹಿತ್ಯ ಪರಿಷತ್ತ್ ಮಂಗಳೂರು ತಾಲೂಕುಘಟಕದಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಪಿ. ಕೃಷ್ಣಮೂರ್ತಿ, ಪದಾಧಿಕಾರಿಗಳಾದ ದೇವಕಿಅಚ್ಯುತ, ಪಧ್ಮನಾಭ ಭಟ್‌ಎಕ್ಕಾರು, ಮೋಲಿ ಮಿರಾಂದ, ಉಪಸ್ಥಿತರಿದ್ದರು.
Comments are closed.