ಕರಾವಳಿ

ಬ್ರಹ್ಮಕಲಶೋತ್ಸವ ಹಿನ್ನೆಲೆ : ಕಟೀಲು ರಸ್ತೆ ಅಭಿವೃದ್ಧಿ – ಸಂಚಾರ ಮಾರ್ಪಾಡು

Pinterest LinkedIn Tumblr

 

ಮಂಗಳೂರು,ಜನವರಿ 17 : ಕಟೀಲು ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಕ್ಷೇತ್ರಕ್ಕೆ ಬರುವ ಮುಖ್ಯ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸುಗಮ ರಸ್ತೆ ಸಂಚಾರ ನಿಟ್ಟಿನಲ್ಲಿ ಮಂಗಳೂರು-ಬಜಪೆ-ಕಟೀಲು ರಸ್ತೆಯಲ್ಲಿ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿದೆ.

ಮಂಗಳೂರಿನಿಂದ ಬಜಪೆ ಮಾರ್ಗವಾಗಿ ಬರುವ ವಾಹನಗಳು ಶಿಬರೂರು ದ್ವಾರದ ಬಳಿ ಎಡಕ್ಕೆ ತಿರುಗಿ ಶಿಬರೂರು ಜಂಕ್ಷನ್ -ಕಿನ್ನಿಗೋಳಿ – ಮೂರು ಕಾವೇರಿ ಮೂಲಕ ಕಟೀಲಿಗೆ ಆಗಮಿಸಬಹುದು. ಕಟೀಲಿನಿಂದ ಮಂಗಳೂರು ಹೋಗುವ ರಸ್ತೆ ಸಂಚಾರದಲ್ಲಿ ಯಾವುದೇ ಮಾರ್ಪಾಡಿಲ್ಲ ಎಂದು ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.

Comments are closed.