ಕುಂದಾಪುರ: ತಾಲೂಕಿನ ಗಂಗೊಳ್ಳಿ ಬಂದರು ಭಾಗದಲ್ಲಿ ಕೆಲವು ದಿನಗಳಿಂದ ಗೂಳಿಯೊಂದು ನಡೆದಾಡಲು ಕಷ್ಟಪಡುತ್ತಿದ್ದು ಇದನ್ನು ಗಮನಿಸಿದ ಸ್ಥಳೀಯರು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರ ಗಮನಕ್ಕೆ ತಂದಿದ್ದಾರೆ.
ಕೂಡಲೇ ಕಾರ್ಯಪ್ರವ್ರತ್ತರಾದ ಗಂಗೊಳ್ಳಿ ಹಿಂಜಾವೇ ಕಾರ್ಯಕರ್ತರು ಸ್ಥಳೀಯ ಪಶು ವೈದ್ಯ ರಾಘವೇಂದ್ರ ಶೆಟ್ಟಿಯವರನ್ನು ಸಂಪರ್ಕಿಸಿ ಅವರ ಮೂಲಕ ಗಾಯಗೊಂಡ ಗೂಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹಿಂಜಾವೇ ಕಾರ್ಯಕರ್ತರ ಮಾನವೀಯ ಸ್ಪಂದನೆಗೆ ಶ್ಲಾಘನೆ ವ್ಯಕ್ತವಾಗಿದೆ.
Comments are closed.