ಕರಾವಳಿ

ಕೇಂದ್ರ ಸಚಿವ ಸದಾನಂದ ಗೌಡ ದ.ಕ.ಜಿಲ್ಲಾ ಪ್ರವಾಸ

Pinterest LinkedIn Tumblr

ಮಂಗಳೂರು ಜನವರಿ 22 : ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಸದಾನಂದ ಗೌಡ ಇವರ ದ.ಕ ಜಿಲ್ಲಾ ಪ್ರವಾಸ ಇಂತಿವೆ.

ಜನವರಿ 23 ರಂದು ಸಂಜೆ 5.30 ಗಂಟೆಗೆ ಸುಳ್ಯ ದೇವರಗುಂಡಕ್ಕೆ ಆಗಮಿಸಿ ವಾಸ್ತವ್ಯ. 24 ರಂದು ಬೆಳಗ್ಗೆ 10.30 ಗಂಟೆಗೆ ಧರ್ಮಸ್ಥಳದ ಧರ್ಮಶ್ರೀ ಅನೆಕ್ಸ್ ಹೊಸ ಅವರಣದ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 2.30 ಗಂಟೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿ, ನಂತರ ಮಂಗಳೂರಿನಲ್ಲಿ ವಾಸ್ತವ್ಯ.

25 ರಂದು ಸಂಜೆ 5 ಗಂಟೆಗೆ ಮಂಗಳೂರಿನಲ್ಲಿ ನಡೆಯುವ ರಾಮ ಲಕ್ಷ್ಮಣ ಜೋಡುಕೆರೆ ಕಂಬಳದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 9.40 ಗಂಟೆಗೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು.

Comments are closed.