ಕರಾವಳಿ

ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರು ಪಾದುಕೆ ಪ್ರತಿಷ್ಠಾಪನೆ

Pinterest LinkedIn Tumblr

ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮ ರಥೋತ್ಸವ ಪ್ರಯುಕ್ತ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಇಂದು ದೇವಳಕ್ಕೆ ಆಗಮಿಸಿದರು.ಶ್ರೀಗಳವರಿಗೆ ಮಂಗಳೂರು ಸಮಾಜ ಭಾಂದವರ ಪರವಾಗಿ ಭವ್ಯ ಸ್ವಾಗತ ನೀಡಲಾಯಿತು.

ಬಳಿಕ ಶ್ರೀಗಳವರು ದೇವ ದರ್ಶನ ಪಡೆದರು , ನೂತನವಾಗಿ ನಿರ್ಮಿಸಲಾದ ಸ್ವರ್ಣ ಖಚಿತ ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರು ಪಾದುಕೆ ಯನ್ನು ಶ್ರೀದೇವಳದ ಪ್ರಕಾರದಲ್ಲಿ ಶ್ರೀಗಳವರ ಅಮೃತ ಹಸ್ತಗಳಿಂದ ಪ್ರತಿಷ್ಠಾಪಿಸಲ್ಪಟ್ಟಿತು.

ಇದೆ ಬರುವ ಶನಿವಾರದಂದು ಬ್ರಹ್ಮ ರಥೋತ್ಸವ ಹಾಗೂ ಆದಿತ್ಯವಾರದಂದು ಅವಭ್ರತ ಮಹೋತ್ಸವ ನಡೆಯಲಿರುವುದು. ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಸಿ ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ಪಂಡಿತ್ ನರಸಿಂಹ ಆಚಾರ್ಯ ಹಾಗು ನೂರಾರು ಭಜಕರು ಉಪಸ್ಥಿತರಿದ್ದರು.

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.