ಮಹಾಲಸಾ ನಾರಾಯಣೀ ದೇವಿಯ ರಜತಮಯ ತೀರ್ಥ ಮಂಟಪ ಕಾಶಿಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಸಮರ್ಪಿಸಲಾಯಿತು.
ಮಂಗಳೂರು, ಫೆಬ್ರವರಿ,07: ವನಿತಾ ಅಚ್ಚುತ್ ಪೈ ಕನ್ವೆನ್ಷನ್ ಸೆಂಟರ್ ಉದ್ಘಾಟನಾ ಸಮಾರಂಭ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತಗಳಿಂದ ಇಂದು ಬೆಳಿಗ್ಗೆ ನಡೆಯಲಿದೆ.
ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ಶ್ರೀ ವೆಂಕಟರಮಣ ದೇವಸ್ಥಾನ ಕೊಂಚಾಡಿ ಶ್ರೀ ಕಾಶೀ ಮಠ ಪದವಿನಂಗಡಿ , ಮಂಗಳೂರು ಇದರ ಪ್ರತಿಷ್ಠಾ ಕಾರ್ಯಕ್ರಮವು ಪರಮ ಪೂಜ್ಯ ಸದ್ಗುರು, ಪ್ರಾತಃ ಸ್ಮರಣೀಯ ಧರ್ಮಾಚಾರ್ಯ ಶ್ರೀ ಸಂಸ್ಥಾನ ಕಾಶೀಮಠದ ಯತಿವರ್ಯ ಶ್ರೀಮದ್ ಸುಧೀಂದ್ರ ತೀರ್ಥ ಭಗವತಪಾದರ ಅಮೃತ ಹಸ್ತಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಇಷ್ಟ ದೇವರಾದ ಶ್ರೀ ವೆಂಕಟರಮಣ ದೇವರು ಹಾಗೂ ಕುಲದೇವಿ ಶ್ರೀ ಮಹಾಲಸಾ ನಾರಾಯಣೀ ದೇವರ ಅನುಗ್ರಹದಿಂದ ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ಅನೇಕ ಸುವರ್ಣಕ್ಷರಗಳಿಂದ ಬರೆಯುವ ಕಾರ್ಯಕ್ರಮಗಳು ನಡೆದು ಈಗ ಮತ್ತೊಮ್ಮೆ ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಗುರುವಾರ ಸಾಯಂಕಾಲ ಶ್ರೀ ಮಹಾಲಸಾ ನಾರಾಯಣೀ ದೇವಿಯ ರಜತಮಯ ತೀರ್ಥ ಮಂಟಪ ಕಾಶಿ\ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕಸ್ತೂರಿ ಸದಾಶಿವ ಪೈ , ಎಂ . ಸುರೇಶ್ ಕಾಮತ್ , ಎಚ್ . ಗೋಕುಲದಾಸ್ ನಾಯಕ್ ,ಮಾರೂರ್ ಶಶಿಧರ್ ಪೈ , ಕೆ . ಅಚ್ಚುತ್ ಪೈ . ಎಂ . ವಿಜಯ್ ಪೈ , ಶ್ರೀ ವೆಂಕಟರಮಣ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಡಿ . ವಾಸುದೇವ್ ಕಾಮತ್ , ಅರುಣ್ ಕಾಮತ್ ,ಜಿ . ರತ್ನಕರ್ ಕಾಮತ್ , ದೀಪಕ್ ಕುಡ್ವ ,ಡಿ . ವೇದವ್ಯಾಸ್ ಕಾಮತ್ , ಅನಿಲ್ ಕಾಮತ್, ಗಣೇಶ್ ಬಾಳಿಗಾ , ಗುರುಪ್ರಸಾದ್ ಕಾಮತ್ , ಪ್ರಶಾಂತ್ ಪೈ ದೀಪಕ್ಚಂದ್ರ ಬಾಳಿಗಾ , ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.
ಇಂದು ಬೆಳಿಗ್ಗೆ 09:28 ರ ಮೀನಾ ಲಗ್ನದಲ್ಲಿ ರಾಜಸ್ಥಾನದ ಜೈಪುರದಲ್ಲಿ ನಿರ್ಮಿಸಲ್ಪಟ್ಟ ಅಮೃತ ಶಿಲಾಮಯ ಶ್ರೀಮತ್ ಸುಧೀಂದ್ರ ತೀರ್ಥರ ವಿಗ್ರಹ ಪ್ರತಿಷ್ಠೆ ಶ್ರೀಗಳವರ ಅಮೃತ ಹಸ್ತಗಳಿಂದ ನಡೆಯಲಿದೆ . ಶ್ರೀ ಭೂ ಸಹಿತ ನರಸಿಂಹ ದೇವರಿಗೆ ಸ್ವರ್ಣ ಕವಚ ಸಮರ್ಪಣೆ ಹಾಗೂ ಬೆಳಿಗ್ಗೆ 11:05 ರ ಲಗ್ನದಲ್ಲಿ ದಾನಿಗಳಿಂದ ಸಮರ್ಪಿಸಲ್ಪಟ್ಟ ಭವ್ಯ ದಿವ್ಯವಾದ ಹಾಗೂ ಭವ್ಯ ಸುಂದರ ವನಿತಾ ಅಚ್ಚುತ್ ಪೈ ಸಭಾ ಭವನದ ಉದ್ಘಾಟನೆ ನೆರವೇರಲಿದೆ.
ಚಿತ್ರ : ಮಂಜು ನೀರೇಶ್ವಾಲ್ಯ
Comments are closed.