ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ ಮತ್ತು ಧರ್ಮನೇಮೋತ್ಸವದ ಧಾರ್ಮಿಕ ಸಭೆ
ಮಂಗಳೂರು, ಫೆಬ್ರವರಿ.10: ಆನಂದ ಅನ್ನುವ ಸೆಲೆಯೇ ಶಿವ. ಶ್ವಾಸ ಶರೀರಾತ್ಮಕ, ವಿಶ್ವಾಸ ಭಾವನಾತ್ಮಕ ಸಂಗತಿಯಾಗಿದೆ. ಶಿವತತ್ವ ಎನ್ನುವುದು ಬಹಳ ಶ್ರೇಷ್ಠ ಹಾಗೂ ಶ್ರೇಯಸ್ಕರವಾದುದು. ಇ೦ಟರ್ ನೆಟ್ ಮೂಲಕ ವಿಶ್ವವನ್ನು ನೋಡಿದರೆ ಇನ್ನರ್ ನೆಟ್ ನಿಂದ ವಿಶ್ವನಾಥನನ್ನು ನೋಡಬಹುದು. ಸರ್ವರ ಅಭ್ಯುದಯಕ್ಕೆ ಉದಯಿಸಿದ್ದು ಧರ್ಮ ಎಂದು ಒಡಿಯೂರು ಶ್ರೀಗುರು ದೇವದತ್ತ ಸ೦ಸ್ಥಾನಮ್ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಸುರತ್ಕಲ್ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ಬ್ರಹ್ಮಕಲಶಾಭೀಷೇಕ, ಅಷ್ಟಪವಿತ್ರ ನಾಗಮಂಡಲೋತ್ಸವ ಹಾಗೂ ಧರ್ಮನೇಮೋತ್ಸವದ ಅಂಗವಾಗಿ ಆದಿತ್ಯವಾರದಂದು ಜರುಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಭಾ ಕಾರ್ಯಕ್ರಮದ ಘನ ಉಪಸ್ಥಿಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅನುವಂಶಿಕ ಅರ್ಚಕ ವೇದಮೂರ್ತಿ ಅನಂತ ಪದ್ಮನಾಭ ಅಸ್ರಣ್ಣ ಅವರು ವಹಿಸಿದ್ದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಚೇಳೈರು ಗಡಿಪ್ರಧಾನರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನ ಆದಿತ್ಯ ಮುಕ್ಕಾಲ್ದಿ ಅವರು ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಮಂಗಳೂರು ಬ೦ಟರ ಯಾನೆ ನಾವಡರ ಮಾತೃಸಂಘ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ವಹಿಸಿದ್ದರು. ಜಾನಪದ ಚಿಂತಕ ಡಾ ವೈ ಯನ್ ಶೆಟ್ಟಿ ದೈವಾರಾಧನೆ ವಿಷಯದ ಕುರಿತು ಧಾರ್ಮಿಕ ಉಪನ್ಯಾಸ ನೀಡಿದರು.
ಜಾನಪದ ವಿದ್ವಾಂಸ ಮತ್ತು ಉಪನ್ಯಾಸಕ ಗಣೇಶ್ ಅಮೀನ್ ಸಂಕಮಾರ್ ಅವರು ಶುಭಾಶ೦ಸನೆಗೈದರು.
ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಕರ್ಣಾಟಕ ಬ್ಯಾಂಕ್ ಲಿ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಕಾರಿ ಮಹಾಬಲೇಶ್ವರ ಎಮ್ ಎಸ್, ಮಾಜಿ ಸಚಿವ ಬಿ ನಾಗರಾಜ ಶೆಟ್ಟಿ , ಸುರತ್ಕಲ್ ಶಾಖೆ ಒಡಿಯೂರು ಬ್ಯಾಂಕ್ ಸುರೇಶ್ ರೈ, ಪಡ್ರೆ ಶ್ರೀ ಧೂಮಾವತಿ ದೈವಸ್ಥಾನ ಬಾಬು ಬ೦ಡ್ರಿಯಾಲ್, ಕೊಲ್ಯ ಜಾರಂದಾಯ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿಪ್ರಸನ್ನ ಸಿ ಕೆ, ಕುಡುಂಬೂರು ಗುತ್ತು ಗುತ್ತಿನಾತ್ ಜಯರಾಮ ಶೆಟ್ಟಿ, ಸುರತ್ಕಲ್ ಇಡ್ಯಾ ಪಣಂಬೂರು ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನ ಅಣ್ಣಪ್ಪ ಅರುವಾಳ್, ಈಶ್ವರ್ ಕಜೇರಿಸಾನ ಸುರತ್ಕಲ್, ಮುಕ್ಕ ಭಂಡಾರ ಮನೆ ದೇವೇಂದ್ರ ಪೂಜಾರಿ, ಪಡ್ರೆ ಧೂಮಾವತಿ ದೈವಸ್ಥಾನ ಅಧ್ಯಕ್ಷ ಬಾಬು ಶೆಟ್ಟಿ, ಕುಳಾಯಿಗುತ್ತು ಶಂಕರ್ ರೈ, ಸುರತ್ಕಲ್ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಆನಂದ ಗುರಿಕಾರ, ಪದವು ಮೇಗಿನಮನೆ ಯಜಮಾನ ಮಂಜಣ್ಣ ಶೆಟ್ಟಿ, ಪೆರ್ಮುದೆ ಗುರುರಾಜ ಮಾಡ ಬೊಳ್ಳುಳ್ಳಿಮಾರುಗುತ್ತು, ಅಗರಮೇಲು ಜಾರಂದಾಯ ದೈವಸ್ಥಾನ ಮೋಹನ್ ಪೂಜಾರಿ, ಎಡಪದವು ರಾಮಭಜನಾ ಮಂದಿರ ಸಮಿತಿ ಅಧ್ಯಕ್ಷ ಮುರಳೀಧರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಉಪಸ್ಥಿತರಿದ್ದರು.
ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಐ ರಮಾನಂದ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಸತ್ಯಜಿತ್ ಸುರತ್ಕಲ್ ಸ್ವಾಗತಿಸಿದರು.
Comments are closed.