ಮುಂಬೈ. ಒರಿಸ್ಸಾದ ಭುವನೇಶ್ವರ್ ನಲ್ಲಿ ಫೆಬ್ರವರಿ 24 ರಿಂದ 28 ಫೆಬ್ರವರಿ 2020 ನಡೆಯುವ ಯೂನಿವರ್ಸಿಟಿ ಖೇಳೋ ಇಂಡಿಯಾ ದಲ್ಲಿ ರೆಫ್ರಿ ಯಾಗಿ ಆಯ್ಕೆ ಯಾಗಿದ್ದಾರೆ. ಪ್ರಧಾನಮಂತ್ರಿ ಆಯೋಜಿಸಿದ ಅಸ್ಸಾಮಿನ ಗೌಹಾಟಿಯಲ್ಲಿ ನಡೆದ 13 ರಿಂದ 17 ವಯಸಿನ ಮಕ್ಕಳಾ ಅತಿ ಕಿರಿಯ ತಂಡದ ಸ್ಪರ್ಧೆಗೆ ರೆಫ್ರಿಯಾಗಿ ಆಯ್ಕೆಯಾದ ಏಕೈಕ ಮಹಿಳೆ ಸರಳ ಶೆಟ್ಟಿಯವರು ಅನ್ನೋದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.
ಸರಳ ಬಿ ಶೆಟ್ಟಿ ಅವರು ಅಂತರಾಷ್ಟ್ರೀಯ ಕ್ರೀಡಾಪಟು ಆಗಿದ್ದು, ಹಲವಾರು ಪ್ರಶಸ್ತಿ ಪುರಸ್ಕಾರಗಳು ಮತ್ತು ಅರ್ಹತೆಯನ್ನು ಪಡೆದಿರುವ ಓರ್ವ ಉತ್ತಮ ವ್ವೈವ್ಟ್ ಲಿಫ್ಟರ್. ಏಷಿಯನ್ ಗೇಮ್ಸ್, ವರ್ಲ್ಡ್ championship ಮತ್ತು ಒಲಿಂಪಿಕ್ಸ್ ರೆಫ್ರಿಯಾಗಿ ಅರ್ಹತೆ ಪಡೆದಿರುವ ಇವರು ಅಂತರಾಷ್ಟ್ರೀ ಯ ವೈಟ್ ಲಿಫ್ಟಿಂಗ್ ಫೆಡರೇಶನ್ ನಡೆಸಿದಂತಹ ಪರೀಕ್ಷೆಯಲ್ಲಿ (ಫೆಬ್ರವರಿ 2 ರಂದು ಕೊಲ್ಕತ್ತದ ಖುದಿರಾಮ ಅನುಶೀಲನ ಕೇಂದ್ರ) ಉತ್ತಮ ದರ್ಜೆಯ ಅಂಕಗಳನ್ನು ಪಡೆದಿರುತ್ತಾರೆ.
ಸುಮಾರು 21 ವರ್ಷಗಳಿಂದ ಭಾರತವನ್ನು ಕ್ರೀಡಾಲೋಕದಲ್ಲಿ ಪ್ರತಿನಿಧಿಸಿದ ಧೀಮಂತ ಮಹಿಳೆ ಮತ್ತು ಕನ್ನಡದ ಹೆಮ್ಮೆಯ ಮಹಿಳೆ ಎಂದು ಇವರನ್ನು ಗುರುತಿಸಬಹುದಾಗಿದೆ. ಮಹಾರಾಷ್ಟ್ರದ ಕ್ರೀಡಾ ಇತಿಹಾಸದಲ್ಲಿ ದಾದಾಜಿ ಕೊಂಡದೇವ, ಛತ್ರಪತಿ ಅವಾರ್ಡ, ವೇಟ್ ಲಿಫ್ಟಿಂಗ್ ಪವರ್ ಲಿಫ್ಟಿಂಗ್ ನಲ್ಲಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ದಕ್ಷಿಣ ಕರಾವಳಿಯ ತುಳುನಾಡಿನ ಹೆಮ್ಮೆಯ ಮಹಿಳೆ ಇವರು ಎನ್ನಬಹುದು.
ಮಹಾರಾಷ್ಟ್ರದ ಅಂತರಾಷ್ಟ್ರೀಯ ರೆಫ್ರಿಯಾಗಿ ಮೊದಲ ಬಾರಿಗೆ ತೇರ್ಗಡೆ ಗೊಂಡ ಏಕೈಕ ಮಹಿಳೆ ಇವರು ಎನ್ನುವ ಕೀರ್ತಿಗೆ ಕೂಡ ಇವರು ಭಾಜನರಾಗಿದ್ದಾರೆ . 14 ಬಾರಿ ನೇಷನಲ್ ಚಾಂಪಿಯನ್, 13 ಬಾರಿ ಏಷ್ಯನ್ ಚಾಂಪಿಯನ್ ರೆಕಾರ್ಡ್ ದಾಖಲೆಯನ್ನು ಮತ್ತು ಡೆನ್ಮಾರ್ಕ, ನಾರ್ವೆ, ಸ್ವೀಡನ್ ನಲ್ಲಿ ಜರುಗಿದ ಸ್ಪರ್ದೆಯಲ್ಲಿ ಸತತ ಮೂರು ಬಾರಿ ಕಂಚಿನ ಪದಕ ಗಳಿಸಿದ ಹೆಗ್ಗಳಿಕೆ ಇವರದ್ದು.2003 ರಲ್ಲಿ ಕಝಾಖಿಸ್ತ ದಲ್ಲಿ ನಡೆದ squat event ಅಂತಾರಾಷ್ಟ್ರೀಯ ದಾಖಲೆಯನ್ನು ಗಳಿಸಿದವರು ಇವರು.
ಅಸ್ಸಾಂ ನ ಗವಾಟಿಯಲ್ಲಿ ಭಾರತ ಸರಕಾರ ಆಯೋಜಿಸಿದ ಯುನಿವರ್ಸಿಟಿ ಖೆಲೋ ಇಂಡಿಯಾದಲ್ಲಿ ರೆಫ್ರಿಯಾಗಿ ಆಯ್ಕೆಗೊಂಡ ಕೀರ್ತಿ ಸರಳ ಶೆಟ್ಟಿಯವರಿಗೆ ಸಲ್ಲುತ್ತದೆ. ಫೆಬ್ರುವರಿಯಲ್ಲಿ ಯುಕ್ರೇನ್ ನಲ್ಲಿ ನಡೆಯುವ ಚಾಂಪಿಯನ್ಶಿಪ್ನಲ್ಲಿ ತಂಡದ ಚೀಫ್ demission ಆಗಿ ಆಯ್ಕೆಯಾಗಿರುತ್ತಾರೆ. ಪ್ರಸ್ತುತವಾಗಿ ನ್ಯಾಷನಲ್ ಪವರ್ ಲಿಫ್ಟರ್ ಫೆಡರೇಷನ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಂಬೈ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿಯಾಗಿ ಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಂಡಿಕೇಟ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ 36 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ ಶ್ರೀಮತಿಯವರು ಸಿಂಡಿಕೇಟ್ ಬ್ಯಾಂಕಿನ ಬ್ರಾಂಡ್ ಅಂಬಾಸಿಡರ್ ಎನ್ನುವ ಹೆಸರಿಗೆ ಭಾಜನರಾಗಿದ್ದಾರೆ.
ಭಾರತೀಯ ಬ್ಯಾಂಕ್ ಅಸೋಸಿಯೇಷನ್ ಕೊಡಮಾಡಿದ ಬೆಸ್ಟ್ ಸ್ಪೋರ್ಟ್ಸ್ ಮ್ಯಾನ್ ಅವರ್ಡ್ ಸ್ಕ್ರೋಲ್ ಆಫ್ ಹಾನರ್ ಪ್ರಶಸ್ತಿ ಗೂಇವರು ಪಾತ್ರರಾಗಿದ್ದಾರೆ ಎನ್ನಲು ಹೆಮ್ಮೆಯೆನಿಸುತ್ತದೆ.
ನ್ಯಾಷನಲ್ ಫೆಡರೇಷನ ಕೊಡಮಾಡುವ ಜೀವನ ಗೌರವ ಪುರಸ್ಕಾರ ಇವರು ಪಡೆದುಕೊಂಡಿದ್ದರು ಎನ್ನುವುದು ಶ್ಲಾಘನೀಯವಾಗಿದೆ. ಜನವರಿಯಲ್ಲಿ ಅಸ್ಸಾಂ ನ ಗವಾಟಿ ಯಲ್ಲಿ ನಡೆದಿರುವ ಖೇಲೋ ಇಂಡಿಯಾ ಕ್ರೀಡೆಯಲ್ಲಿ ಸರಳ ಬಿ ಶೆಟ್ಟಿಯವರು ಮಹಾರಾಷ್ಟ್ರದ ತರಬೇತುದಾರರಾಗಿ ಪ್ರತಿನಿಧಿಸಿದ್ದಾರೆ.
ಅವರ ಯೋಗ್ಯ ಮಾರ್ಗದರ್ಶನದಿಂದ ಭಾಗವಹಿಸಿದ ಅವರ ತಂಡ ಚಾಂಪಿಯನ್ ಪಡೆದಿರುತ್ತಾರೆ. ವೈಟ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಹತ್ತು ಬಾರಿ ಕ್ಯಾಪ್ಟನ್ ಆಗಿ ಕೆಲಸ ಮಾಡಿದ ಹೆಮ್ಮೆ ಕೂಡ ಸರಳ ಶೆಟ್ಟಿಯವರಿಗೆ ಇದೆ.
_ದಿನೇಶ್ ಕುಲಾಲ್
Comments are closed.