ಕರಾವಳಿ

ಕಾಂತಾವರ ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವಸ್ಥಾನ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶ ಉತ್ಸವದ ಸಮಾಲೋಚನಾ ಸಭೆ

Pinterest LinkedIn Tumblr

ಮುಂಬೈ : ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವಸ್ಥಾನದ ಜೀರ್ಣೋದ್ದಾರದ ಮುಂಬೈ ಸಮಿತಿಯ ಸಮಾಲೋಚನಾ ಸಭೆಯು ಮುಂಬೈ ಸಮಿತಿಯ ಅಧ್ಯಕ್ಷರಾದ ಅಶೋಕ್ ಅಡ್ಯಂತಾಯ ಬೇಲಾಡಿ ಇವರ ಅಧ್ಯಕ್ಷತೆಯಲ್ಲಿ ನವೋದಯ ಜ್ಯೂನಿಯರ್ ಕಾಲೇಜಿನ ಸಬಾಂಗಣದಲ್ಲಿ ದಿನಾಂಕ 23.02.2020 ರ ಆದಿತ್ಯವಾರ ನಡೆಯಿತು.

ಮುಂಬೈ ಸಮಿತಿಯ ಪ್ರದಾನ ಕಾರ್ಯದರ್ಶಿ ಪ್ರಶಸ್ತ ಶೆಟ್ಟಿ ಬೇಲಾಡಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ದೈವಸ್ಥಾನ ಜೀರ್ಣೋದ್ದಾರ ಕಾಮಗಾರಿಯ ವಿವರನೆಯನ್ನು ನೀಡಿ ಮುಂದಿನ ಕೆಲಸ ಕಾರ್ಯಗಳನ್ನು ವಿವರಿಸಿದರು ಮತ್ತು ಬ್ರಹ್ಮಕಲಶದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಕೋಶಾಧಿಕಾರಿ ಪ್ರಕಾಶ್ ಪೂಜಾರಿ ದೇಣಿಗೆ ಸಂಗ್ರಹ ದ ಬಗ್ಗೆ ವಿನಂತಿಸಿದರು.

ಮುಂಬೈ ಸಮಿತಿಯ ಅದ್ಯಕ್ಸರಾದ ಅಶೋಕ್ ಅಡ್ಯಂತಾಯ ಬೇಲಾಡಿ ಮಾತಾಡಿ ಊರಿನ ದೈವ ಮತ್ತು ದೇವರ ಜೀರ್ಣೋದ್ದಾರ ಮಾಡುದರ ಕೆಲಸ ಕಾರ್ಯಗಳಿಗೆ ನಾವೂ ತನು ಮನ ದನ ಗಳ ಸಹಕಾರವನ್ನು ನೀಡಬೇಕು . ನಿಮ್ಮೆಲ್ಲರ ಸಹಕರವನ್ನು ನಾವೂ ಬಯಸುತೇವೆ. ದೈವಗಳ ಜೀರ್ಣೋದ್ದಾರ ಒಂದೂ ಪುಣ್ಯದ ಕೆಲಸ ಇದರಿಂದ ಊರಿಗೆ ತುಂಬಾ ಒಳ್ಳೆಯದು. ನೀವೆಲ್ಲಾ ಸಹಕರಿಸಿದಲ್ಲಿ ಜೀರ್ಣೋದ್ದಾರ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣ ಗೋಳಿಸಬಹುದು ಹಾಗೇನೆ ಮೇ ತಿಂಗಳ 5,6,7 ರಂದು ನಡೆಯುವ ಬ್ರಹ್ಮಕಲಶ ಉತ್ಸವದಲ್ಲಿ ತಾವೆಲ್ಲರೂ ಬಾಗವಹಿಸಿ ದೇವರ ಪ್ರಸಾದವನ್ನು ಸ್ವೀಕಸಬೇಕು ತಿಳಿಸಿದರು.

ಈ ಸಭೆಯಲ್ಲಿ ಕಾಂತಾವರ ಗ್ರಾಮಕ್ಕೆ ಒಳಪಟ್ಟ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಹಾಜಿರಿದ್ದರು. ಪ್ರದಾನ ಕಾರ್ಯದರ್ಶಿ ಪ್ರಶಸ್ತ ಶೆಟ್ಟಿ ಬೇಲಾಡಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದನಾರ್ಪನಗೈದರು.

_ದಿನೇಶ್ ಕುಲಾಲ್

Comments are closed.