ಕರಾವಳಿ

ಕ್ಷೇತ್ರವನ್ನು ಅಭಿವೃದ್ಧಿಯ ಗುರಿಯೆಡೆಗೆ ಸಾಗಿಸುವ ಮಹತ್ತರದ ಹೊಣೆಗಾರಿಕೆ ನಮ್ಮ ಮೇಲಿದೆ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಮರೋಳಿ ವಾರ್ಡಿನಲ್ಲಿ 15 ಲಕ್ಷ ರೂಪಾಯಿ ಅನುದಾನದಲ್ಲಿ ನಡೆಯುವ ತೋಡಿನ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಕಾಮತ್, ಮರೋಳಿ ಗ್ರಾಮದ ಅಡು ಪರಿಸರದ ನಿವಾಸಿಗಳು ಮಳೆಗಾಲದ ಸಂಧರ್ಭದಲ್ಲಿ ಕೃತಕ ನೆರೆಯಿಂದ ಸಂಕಷ್ಟ ಅನುಭವಿಸುವ ಬಗ್ಗೆ ಈ ಹಿಂದೆ ಸ್ಥಳೀಯ ಮುಖಂಡರು ವಿವರಿಸಿದ್ದರು. ತೋಡಿನ ಇಕ್ಕೆಲಗಳಲ್ಲೂ ಕೂಡ ತಡೆಗೋಡೆ ರಚಿಸಿದರೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು ಎಂಬ ಕಾರಣದಿಂದ ಮೊದಲ ಹಂತದ ಅನುದಾನ ನೀಡಲಾಗಿದೆ ಎಂದು ಹೇಳಿದ್ದಾರೆ.

ಸದ್ಯ ಬಿಡುಗಡೆಯಾಗುವ ಅನುದಾನದಿಂದ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ಬಾರಿ ಹೆಚ್ಚುವರಿ ಅನುದಾನ ಒದಗಿಸಿ ಇನ್ನುಳಿದ ಭಾಗದಲ್ಲೂ ಕೂಡ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಈ ಪರಿಸರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಮರೋಳಿ ವಾರ್ಡಿನ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯ ಗುರಿಯೆಡೆಗೆ ಸಾಗಿಸುವ ಮಹತ್ತರದ ಹೊಣೆಗಾರಿಕೆ ನಮ್ಮ ಮೇಲಿದೆ. ಹಾಗಾಗಿ ಪ್ರತಿಯೊಂದು ವಾರ್ಡನ್ನು ಅಭಿವೃದ್ಧಿಪಡಿಸಿದರೆ ಮಂಗಳೂರಿನ ಸರ್ವತೋಮುಖ ಪ್ರಗತಿ ಸಾಧಿಸಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ನಮ್ಮ ಚಿಂತನೆಯಿದ್ದು ಪ್ರತಿಯೊಬ್ಬರ ಸಹಕಾರವೂ ಅಮೂಲ್ಯ ಕೊಡುಗೆಯಾಗಲಿದೆ ಎಂದು ಹೇಳಿದ್ದಾರೆ.

ಈ ಸಂಧರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯರಾದ ಕೇಶವ ಮರೋಳಿ, ಬಿಜೆಪಿ ಮುಖಂಡರಾದ ಕಿರಣ್ ಮರೋಳಿ,ಜಗನ್ನಾಥ ಅಡುಮರೋಳಿ, ಜಗನ್ನಾಥ ಶೆಣೈ, ಪ್ರಶಾಂತ್, ಸರಳ, ಮಾಲತಿ, ದೇವಪ್ಪ, ಸತೀಶ್ ಬಜ್ಜೋಡಿ, ಬೋಜ ಅಮೀನ್, ರಾಘು ಹಾಗೂ ಸ್ಥಳೀಯರಾದ ರಂಜಿತ್ ಮರೋಳಿ, ಸುಶಾಂತ್ ಪಾಪುಮನೆ,ವಿದ್ಯಾ, ಬಾಲಕೃಷ್ಣ ಸುವರ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Comments are closed.