ಮಂಗಳೂರು ಫೆಬ್ರವರಿ 29: ವೀರರಾಣಿ ಅಬ್ಬಕ್ಕ ಉತ್ಸವಕ್ಕೆ ಶನಿವಾರ ಚಾಲನೆ ದೊರಕಲಿದೆ. ಅಬ್ಬಕ್ಕ ಉತ್ಸವ ಉದ್ಘಾಟನಾ ಸಮಾರಂಭವನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂಜೆ 5 ಗಂಟೆಗೆ ಅಸೈಗೋಳಿ ಕೇಂದ್ರ ಮೈದಾನದಲ್ಲಿ ನೆರವೇರಿಸಲಿದ್ದಾರೆ.
ಇದಕ್ಕೂ ಮುನ್ನ ಮಧ್ಯಾಹ್ನ 3.30 ಗಂಟೆಗೆ ಅಬ್ಬಕ್ಕ ಉತ್ಸವ ಮೆರವಣಿಗೆಯ ಉದ್ಘಾಟನೆಯನ್ನು ಮಂಗಳೂರು ಶಾಸಕ ಯು.ಟಿ. ಖಾದರ್ ದೇರಳಕಟ್ಟೆಯಲ್ಲಿ ನೆರವೇರಿಸಲಿದ್ದಾರೆ. ನಾಡಿನ ವಿವಿಧ ಕಲಾತಂಡಗಳು ಆಕರ್ಷಕ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ದೇರಳಕಟ್ಟೆಯಿಂದ ಅಸೈಗೋಳಿವರೆಗೆ ಈ ಮೆರವಣಿಗೆ ಸಾಗಲಿದೆ.
ಫೆಬ್ರವರಿ 29 ರಂದು ಅಬ್ಬಕ್ಕ ಉತ್ಸವದಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳು ಇಂತಿವೆ : ಮಧ್ಯಾಹ್ನ 3.45 ಗಂಟೆಯಿಂದ 4.15 ರವರೆಗೆ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಅಬ್ಬಕ್ಕನ ಬಗ್ಗೆ ಕಿರು ನಾಟಕ, ಸಂಜೆ 4.15 ಗಂಟೆಯಿಂದ 4.30 ರವರೆಗೆ ಬ್ಯಾರಿ ಸಾಂಸ್ಕ್ರತಿಕ ವೈವಿಧ್ಯ, ಸಂಜೆ 4.30 ಗಂಟೆಯಿಂದ ಸಂಜೆ 4.45 ರವೆರಗೆ ಕೊಂಕಣಿ ಸಾಂಸ್ಕ್ರತಿಕ ವೈವಿಧ್ಯ, 4.45 ಗಂಟೆಯಿಂದ 5 ರವರೆಗೆ ಮಂಗಳೂರು ಮೋಹಿತ ಮತ್ತು ಬಳಗ ವತಿಯಿಂದ ಅಬ್ಬಕ್ಕ ಸ್ವಾಗತ ನೃತ್ಯ, ಸಂಜೆ 5 ಗಂಟೆಯಿಂದ 6.30 ರವರೆಗೆ ಉದ್ಘಾಟನೆ ಕಾರ್ಯಕ್ರಮ, ಸಂಜೆ 6.30 ಗಂಟೆಯಿಂದ ರಾತ್ರಿ 9 ರವರೆಗೆ ಬೆಂಗಳೂರು ಸಂಗೀತ ಕಟ್ಟಿ ವತಿಯಿಂದ ಸಂಗೀತ ಕಾರ್ಯಕ್ರಮ, ರಾತ್ರಿ 9 ಗಂಟೆಯಿಂದ 9.30 ರವರೆಗೆ ಭೋಜರಾಜ್ ವಾಮಂಜೂರು ರವರಿಂದ ಹಾಸ್ಯ ಕಾರ್ಯಕ್ರಮ, ರಾತ್ರಿ 9.30 ಗಂಟೆಯಿಂದ 10.30 ರವರೆಗೆ ಮಂಗಳೂರು ಲಾವಣ್ಯ ಮತ್ತು ಬಳಗ ವತಿಯಿಂದ ನೃತ್ಯ ಸಂಗಮ ನಡೆಯಲಿದೆ.
Comments are closed.