ಮಂಗಳೂರು : ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯ ಉಪಸಂಪಾದಕರಾಗಿರುವ ಬಿ. ರವೀಂದ್ರ ಶೆಟ್ಟಿ ಬರೆದಿರುವ `ನಮ್ಮ ಮಂಗಳೂರು’ ಮಂಗಳೂರು ಮಹಾನಗರ ಪಾಲಿಕೆಯ ಸಮಗ್ರ ನೋಟ ಎಂಬ ಕೃತಿ ಮಾರ್ಚ್ 7 ರಂದು ಮಂಗಳೂರು ಪುರಭವನದಲ್ಲಿ ಬೆಳಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಮಂಗಳೂರು ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನಡೆಯಲಿರುವ ರಾಜ್ಯ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಕೃತಿ ಬಿಡುಗಡೆಯಾಗಲಿದೆ.
ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಪ್ರವಾಸೋದ್ಯಮ ಖಾತೆ ಸಚಿವ ಸಿ. ಟಿ. ರವಿ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ , ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿರುವರು.
ಕೃತಿಗೆ ಪ್ರೊ. ಬಿ. ಎ. ವಿವೇಕ ರೈ ಅವರು ಮುನ್ನುಡಿ ಬರೆದಿದ್ದು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಬೆನ್ನುಡಿ ಬರೆದಿದ್ದಾರೆ. ವಿಜಯ ಕರ್ನಾಟಕ ಮಂಗಳೂರಿನ ಸ್ಥಾನೀಯ ಸಂಪಾದಕ ಯು. ಕೆ. ಕುಮಾರ್‌ನಾಥ್ ಅವರ ಆಶಯ ಮಾತುಗಳಿವೆ.
ಮಂಗಳೂರಿನ ಸಮಗ್ರ ಚಿತ್ರಣ : ಈ ಗ್ರಂಥದಲ್ಲಿ ಈ ಗ್ರಂಥದ ಕೃತಿಯಲ್ಲಿ ಮಂಗಳೂರಿನ ಜನಪ್ರತಿನಿಗಳು, ದಕ್ಷಿಣ ಕನ್ನಡ ಜಿಯ ಕಿರುನೋಟ, ಮಂಗಳೂರು ಮಹಾನಗರ ಪಾಲಿಕೆಯ ಪ್ರಮುಖ ಅಂಕಿಅಂಶಗಳು, ಮಂಗಳೂರಿನ ಆಡಳಿತದ ಇತಿಹಾಸ, ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ಆಡಳಿತ ನಡೆಸುವ ವ್ಯವಸ್ಥೆ ಸಮಗ್ರ ವಿವರಗಳಿವೆ. ಮಂಗಳೂರು ಮಹಾನಗರ ಪಾಲಿಕೆಗೆ ನಡೆದ 1983ರ ಮೊದಲ ಚುನಾವಣೆಯಿಂದ ತೊಡಗಿ 2019ರ ವರೆಗಿನ ಚುನಾವಣೆಯ ಸಮಗ್ರ ವಿವರಗಳು, ಆಡಳಿತ ನಡೆಸಿದ ಪಕ್ಷಗಳು, ಜನಪ್ರತಿನಿಗಳ ವಿವರಗಳು, ವಿಶೇಷವಾಗಿ ಕಳೆದ 36ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಪೊರೇರ್ಟಗಳಾಗಿ ಕರ್ತವ್ಯನಿರ್ವಹಿಸಿದವರ ಹೆಸರು, ಭಾವಚಿತ್ರಗಳಿವೆ. ಸಾರ್ವಜನಿಕರಿಗೆ ಪಾಲಿಕೆಯಿಂದ ಏನೇನು ಸೌಲಭ್ಯಗಳು ದೊರೆಯುತ್ತವೆ. ಅವುಗಳನ್ನು ಪಡೆಯುವುದು ಹೇಗೆ ಸೇರಿದಂತೆ ಪಾಲಿಕೆಯ ಆಡಳಿತ ಹಾಗೂ ಸೌಲಭ್ಯದ ವಿವರಗಳು ಈ ಗ್ರಂಥದಲ್ಲಿ ಅಡಕವಾಗಿವೆ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಕೆರೆ, ಪಾರ್ಕ್, ಮೈದಾನ, ಗ್ರಂಥಾಲಯ, ಉದ್ಯಾನವನ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಹೊಟೇಲ್ ಗಳು, ಪ್ರಮುಖ ಶ್ರದ್ಧಾಕೇಂದ್ರಗಳು, ಮುಖ್ಯ ಪ್ರಸಾಸಿ ತಾಣಗಳು, ತುಳು ಸಿನಿಮಾಗಳು, ಚಿತ್ರಮಂದಿರ ಗಳು, ಮಾಧ್ಯಮ ಸಂಸ್ಥೆ, ಪೊಲೀಸ್ ಠಾಣೆಗಳ ವಿವರಗಳು, ಸಂಚಾರ ವ್ಯವಸ್ಥೆಯ ಮಾಹಿತಿಗಳು ಹೀಗೆ ಹತ್ತು ಹಲವು ವಿಚಾರಗಳು ಈ ಗ್ರಂಥದಲ್ಲಿ ಒಳಗೊಂಡಿವೆ. ಒಂದರ ಎಲ್ಲ ಮಾಹಿತಿಗಳನ್ನು ಪಡೆಯಬಹುದಾದ ಒಂದು ಪುಟ್ಟ ಪ್ಯಾಕೇಜ್ ನಂತಿರುವ ಇದು ಪ್ರತಿಯೊಬ್ಬ ನಾಗರಿಕರಿಗೂ ಅತ್ಯಂತ ಉಪಯುಕ್ತವಾದ ಗ್ರಂಥವಾಗಿದೆ.
Comments are closed.