ಕರಾವಳಿ

ಅಸುಸ್‌ ಇಂಡಿಯಾ ಸ್ಟೋರ್‌‌ನಿಂದ ನಗರದ ಜನತೆ ಗುಣಮಟ್ಟದ ಸೇವೆ ನಿರೀಕ್ಷಿಸ ಬಹುದು : ಶಾಸಕ ಕಾಮಾತ್

Pinterest LinkedIn Tumblr

ಮಂಗಳೂರು : ತಂತ್ರಜ್ಞಾನದ ಪ್ರಮುಖ ಕಂಪನಿಯಾಗಿರುವ ಎಎಸ್‍ಯುಎಸ್ ಇಂಡಿಯಾ ಮಂಗಳೂರಿನಲ್ಲಿ ತನ್ನ ಸ್ಟೋರ್ ಆರಂಭಿಸಿದ್ದು, ನಗರದ ಪಿವಿಎಸ್ ಸರ್ಕಲ್ ಬಳಿಯ ಸಾನು ಪ್ಯಾಲೇಸ್ ನಲ್ಲಿ ನೂತನ ಮಳಿಗೆ ಇತ್ತೀಚಿಗೆ ಶುಭಾರಂಭಗೊಂಡಿತ್ತು.

ಎಎಸ್‍ಯುಎಸ್ ಇಂಡಿಯಾದ ಡಿಸ್ಟ್ರಿಬ್ಯೂಶನ್ ಕಮರ್ಷಿಯಲ್ ಮ್ಯಾನೇಜರ್ ಪಿಯೂಷ್ ಸೇಥ್, ಮಾಲೀಕರಾದ ರಮೇಶ್‌ ಕಾಮತ್‌, ಸಂತೋಷ್‌ಕುಮಾರ್‌ ಅವರು ಈ ಹೊಸ ಸ್ಟೋರ್‌ ಅನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಅಥಿತಿಗಳಾಗಿ ಭಾಗವಹಿಸಿದ ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮಾತ್ ಅವರು ಮಾತನಾಡ್, ಅಸುಸ್‌ ಇಂಡಿಯಾ ಸ್ಟೋರ್‌‌ನಿಂದ ನಗರದ ಜನತೆ ಗುಣಮಟ್ಟದ ಸೇವೆ ನಿರೀಕ್ಷಿಸ ಬಹುದು. ಸಂಸ್ಥೆಯು ನಗುಮುಖದ ಸೇವೆಯೊಂದಿಗೆ ನಗರದ ಜನತೆಗೆ ಉತ್ತಮವಾದ ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ಯಶಸ್ಸು ಪಡೆಯಲಿ ಎಂದು ನೂತನ ಮಳಿಗೆಗೆ ಶುಭಾ ಹಾರೈಸಿದರು. ಮನಪಾ ಸದಸ್ಯರಾದ ಸುಧೀರ್ ಕಣ್ಣೂರು, ಮನೋಹರ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ಮಾಜಿ ಸದಸ್ಯ ಭಾಸ್ಕರ್ ಚಂದ್ರ ಶೆಟ್ಟಿ, ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ಅಧ್ಯಕ್ಷ ಅಶೋಕ ಶೇಟ್ ಎಂ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಎಎಸ್‍ಯುಎಸ್ ಇಂಡಿಯಾದ ಡಿಸ್ಟ್ರಿಬ್ಯೂಶನ್ ಕಮರ್ಷಿಯಲ್ ಮ್ಯಾನೇಜರ್ ಪಿಯೂಷ್ ಸೇಥ್ ಅವರು ಮಾತನಾಡಿ, ಝೆನ್‍ಬುಕ್ ಪ್ರೊ ಡ್ಯುಯೋ, ಝೆನ್‍ಬುಕ್, ಝೆನ್‍ಬುಕ್-ಫ್ಲಿಪ್, ವಿವೋಬುಕ್ ಮತ್ತು ರಿಪಬ್ಲಿಕ್ ಬುಕ್ ಆಫ್ ಗೇಮರ್ಸ್ (ಆರ್‍ಒಜಿ) ಲ್ಯಾಪ್‍ಟಾಪ್‍ಗಳು ಸೇರಿದಂತೆ ಸಮಗ್ರವಾದ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಹಾರ್ಡ್‍ವೇರ್ ಉತ್ಪನ್ನಗಳನ್ನು ಇದೆ. 2020ರ ಅಂತ್ಯದ ವೇಳೆಗೆ 200 ಕ್ಕೂ ಹೆಚ್ಚು ಸ್ಟೋರ್‌ಗಳನ್ನು ವಿವಿಧ ಭಾಗಗಳಲ್ಲಿ ಆರಂಭಿಸುವ ಗುರಿ ಹೊಂದಿದೆ.

ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸುಲಭವಾಗಿ ಖರೀದಿಸಲುಈ ಹೊಸ ಸ್ಟೋರ್ ನೆರವಾಗಲಿದೆ. ಗ್ರಾಹಕರು ಝೆನ್‍ಬುಕ್ಪ್ರೊ ಡ್ಯುಯೋ, ಝೆನ್‍ಬುಕ್, ಝೆನ್‍ಬುಕ್-ಫ್ಲಿಪ್, ವಿವೋಬುಕ್ ಮತ್ತು ರಿಪಬ್ಲಿಕ್ ಬುಕ್ ಆಫ್ ಗೇಮರ್ಸ್ (ಆರ್‍ಒಜಿ) ಲ್ಯಾಪ್‍ಟಾಪ್‍ಗಳು ಸೇರಿದಂತೆ ಸಮಗ್ರವಾದ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಹಾರ್ಡ್‍ವೇರ್ ಉತ್ಪನ್ನಗಳನ್ನು ಸುಲಭವಾಗಿ ಖರೀದಿಸ ಬಹುದಾಗಿದೆ.

ನಮಗೆ ಕರ್ನಾಟಕ ಬಹು ಮುಖ್ಯವಾದಮಾರುಕಟ್ಟೆಯಾಗಿದ್ದು, ಈ ನಮ್ಮ ಹೊಸ ಎಇಎಸ್ ಇದಕ್ಕೆ ಸಾಕ್ಷಿಯಾಗಿದೆ. 2019ರ ಆರಂಭದಲ್ಲಿ ನಮ್ಮ ಆಫ್‍ಲೈನ್ ಮಾರುಕಟ್ಟೆಯನ್ನು ವಿಸ್ತರಣೆ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇದುವರೆಗೆ ದೇಶಾದ್ಯಂತ 100 ಕ್ಕೂ ಹೆಚ್ಚು ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳನ್ನುಆರಂಭಿಸಿದ್ದೇವೆ. ಈ ಮೂಲಕ 2020 ರ ಅಂತ್ಯದ ವೇಳೆಗೆ 20ಸ್ಟೋರ್‍ಗಳನ್ನು ಆರಂಭಿಸುವ ಗುರಿಯತ್ತ ಸಾಗಿದ್ದೇವೆ’’ ಎಂದು ತಿಳಿಸಿದರು.

Comments are closed.