ಕುಂದಾಪುರ: ಕುಂದಾಪುರ ತಾಲೂಕು ಹಕ್ಲಾಡಿ ಗ್ರಾಮ ಯಳೂರು ಮಕ್ಕಿಮನೆ ದಿವಂಗತ ಚಿಕ್ಕಮ್ಮ ಶೆಡ್ತಿ ಹಾಗೂ ಮಹಾಬಲ ಶೆಟ್ಟಿ ದಂಪತಿ ಪುತ್ರ ಮಂಜುನಾಥ ಶೆಟ್ಟಿ ಭಾರತೀಯ ಸೇನೆಗೆ ಆಯ್ಕೆಯಾಗಿ ವಿವಿಧ ತರಬೇತಿ ಪಡೆದು ರಜೆ ನಿಮಿತ್ತ ಊರಿಗೆ ಬಂದಿದ್ದು ಮುಂದಿನ ತಿಂಗಳು ಜಮ್ಮುವಿನಲ್ಲಿ ಸೇವಾ ವೃತ್ತಿ ಆರಂಭಿಸಲಿದ್ದಾರೆ.
ಬಾಲ್ಯದಿಂದ ಕೈತುತ್ತು ನೀಡಿ, ಸಾಕಿ ಬೆಳೆಸಿದ ಮೊಮ್ಮಗ ಮಂಜುನಾಥ್ ಯೋಧನಾಗಿದ್ದು ತರಬೇತಿ ಮುಗಿಸಿ ಮನೆಗೆ ಬಂದ ಮೊಮ್ಮಗನನ್ನು ಅಜ್ಜಿ ನೀಲಮ್ಮ ಶೆಟ್ಟಿ ಹಾಗೂ ಊರಿನಲ್ಲಿನ ಸ್ನೇಹಿತರು ಆತ್ಮೀಯವಾಗಿ ಬರಮಾಡಿಕೊಂಡರು.
‘ಕನ್ನಡಿಗ ವರ್ಲ್ಡ್’ ಜೊತೆ ಮಾತನಾಡಿದ ಮಂಜುನಾಥ, ಚಿಕ್ಕಂದಿನಿಂದ ಬಡತನದಲ್ಲಿ ಬೆಳೆದು ಪದವೀಧರನಾದೆ. ಮನೆಯನ್ನು ಉತ್ತಮವಾಗಿ ನಿರ್ವಹಿಸಬೇಬೇಕು ಜೊತೆಗೆ ದೇಶ ಸೇವೆ ಮಾಡಬೇಕೆಂಬ ನಿಟ್ಟಿನಲ್ಲಿ ಭಾರತೀಯ ಸೇನೆ ಸೇರಿದೆ.ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಯುವಕರು ಸೈನ್ಯ ಸೇರಲು ಆಸಕ್ತಿ ತೋರಬೇಕು. ಮನೆಯವರು ಮನೆಯ ಮಕ್ಕಳನ್ನು ದೇಶ ಸೇವೆಗೆ ಕಳುಹಿಸಲು ಮುಂದಾಗಬೇಕೆಂದು ಅವರು ಹೇಳಿದರು.
ನಾವೇಕೆ ಸೈನ್ಯ ಸೇರಲು ಹಿಂದುಳಿದಿದ್ದೇವೆ..
ಸೈನ್ಯ, ರೈಲ್ವೆ, ಪೊಲೀಸ್ ವೃತ್ತಿಗೆ ದಕ ಉಡುಪಿ ಜಿಲ್ಲೆ ಯುವಕರು ಹಿಂದೇಟು ಹಾಕುತ್ತಿದ್ದು, ಇದಕ್ಕೆ ಮಾಹಿತಿ ಕೊರತೆ ಕಾರಣ. ಸೈನ್ಯಕ್ಕೆ ಸೇರಿದೋರು ಜೀವಂತ ಬರುತ್ತಾರೋ ಇಲ್ಲವೋ ಎನ್ನುವ ಅಪನಂಬಿಕೆ ಒಂದಾದರೆ, ಸೈನ್ಯ ಎಂದರೆ ಯುದ್ದ ಎನ್ನುವ ತಪ್ಪು ಕಲ್ಪನೆ ಯುವಕರು ಹಿಂದೇಟು ಹಾಕಲು ಕಾರಣ. ಉಡುಪಿಯಲ್ಲಿ ನಡೆಯುವ ಸೈನ್ಯ ನೇಮಕಾತಿ ರ್‍ಯಾಲಿಯಲ್ಲಿ ಉತ್ತರ ಕನ್ನಡ, ಮಹಾರಾಷ್ಟ್ರ ಅಲ್ಲದೆ ಬೇರೆ ರಾಜ್ಯದಿಂದ ಯುವಕರು ಬರುತ್ತಿದ್ದು, ನಾವು ಮಾತ್ರ ಹಿಂದೆ ಉಳಿದಿದ್ದೇವೆ. ಇಲ್ಲಿನ ಯುವಕರು ಡಾಕ್ಟರ್, ಇಂಜಿನಿಯರ್, ಬ್ಯಾಂಕ್ ವೃತ್ತಿ ಅವಲಂಬಿತ. ಪೋಷಕರು ಅದಕ್ಕೆ ಒತ್ತು ಕೊಡುತ್ತಾರೆ. ಕ್ರೀಡೆಯಲ್ಲೂ ಕೂಡಾ ಸಾಧನೆ ಮಾಡುವ ಅವಕಾಶವಿದ್ದು, ಸ್ಪೋಡ್ಸ್ ಮನ್ ಕೋಟಾದಲ್ಲಿ ಕೆಲಸವೂ ಸಿಗುತ್ತದೆ. ದೇಶವೇ ಗುರುತಿಸುವ ಸಾಧನೆ ಸಾಧ್ಯ. ಹಾಗೆ ಸೈನಕ್ಕೆ ಸೇರಿದ ಮಾತ್ರಕ್ಕೆ ಯುದ್ದ ಮಾಡಬೇಕು ಎನ್ನುವ ಅರ್ಥವಲ್ಲ.. ಮಿಲ್ಟ್ರಿಯಲ್ಲೂ ಕೂಡಾ ಬೇರೆ ಬೇರೆ ಅವಕಾಶವಿದ್ದು, ಸಾಧನೆ ಮಾಡಲು ಸಾಧ್ಯ.. ಸೈನ್ಯ ಸೇರಿದ ನಂತರವೂ ನಿಮ್ಮ ಆಯ್ಕೆ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ.. ಸೈನ್ಯಕ್ಕೆ ಸೇರುವ ಮಾರ್ಗ, ಮಾಹಿತಿ ನೀಡಿದರೆ ನಮ್ಮ ಅವಳಿ ಜಿಲ್ಲೆಯ ಯುವಕರೂ ಸೈನ್ಯ ಸೇರುತ್ತಾರೆ.. ಎಪ್ರಿಲ್ ತಂಗಳು ಉಡುಪಿಯಲ್ಲಿ ನಡೆಯುವ ರ್‍ಯಾಲಿಯಲ್ಲಿ ಭಾಗವಹಿಸುವ ಮೂಲಕ ಅವಳಿ ಜಿಲ್ಲೆ ಯುವಕರು ಕೂಡಾ ದೇಶ ಸೇವೆ ಮಾಡಲು ಹಿಂದೆ ಉಳಿಯೋದಲ್ಲ ಎನ್ನೋದ ರೂಪಿಸಬೇಕು ಎನ್ನೋದು ಯೋಧ ಮಂಜುನಾಥ ಶೆಟ್ಟಿ ಕಳಕಳಿ.
ಬೇರೆ ಬೇರೆ ಕ್ಷೇತ್ರದಲ್ಲಿ ಉದ್ಯೋಗ ಅವಕಾಶವಿದ್ದರೂ ಸೈನ್ಯಕ್ಕೆ ಸೇರಬೇಕು ಎನ್ನೋದು ನನ್ನ ಕನಸಾಗಿತ್ತು. ಕ್ರೀಡೆಯಲ್ಲಿ ತೊಡಗಿಸಿಕೊಂಡು, ದೈಹಿಕ ಕ್ಷಮತೆ ಕಾಪಾಡಿಕೊಂಡಿದ್ದರಿಂದ ತರಬೇತಿ ಕಷ್ಟವಾಗಲಿಲ್ಲ. ತರಬೇತಿ ಮುಗಿದು, ಜಮ್ಮವಿನಲ್ಲಿ ವೃತ್ತಿ ಆರಂಭವಾಗಲಿದೆ. ಮನೆ ಜವಾಬ್ದಾರಿ ಕೂಡಾ ಇದ್ದು, ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುವ ಹೊಣೆ ನನ್ನ ಮೇಲಿದೆ. ಸೈನಿಕ ಬದುಕು ಶಿಸ್ತು ಕಲಿಸುತ್ತದೆ. ಎಲ್ಲರೂ ಒಂದೇ ಕುಟುಂಬದವರು ಎನ್ನುವ ಹಾಗೆ ಎಲ್ಲರನ್ನೂ ನೋಡಿಕೊಳ್ಳಲಾಗುತ್ತದೆ. ಸೈನ್ಯ ಸೇರುವ ಬಗ್ಗೆ ಇರುವ ತಪ್ಪು ಕಲ್ಪನೆ ಬಿಟ್ಟು ಯುವಕರು ಸೇನ್ಯಕ್ಕೆ ಸೇರುವ ಮೂಲಕ ಸೇವೆ ಮಾಡಲು ಇರುವ ಅವಕಾಶ ಬಳಸಿಕೊಳ್ಳಬೇಕು.
– ಮಂಜುನಾಥ ಶೆಟ್ಟಿ ಯೋಧ, ಬಾಳೆಮನೆ, ಹಕ್ಲಾಡಿ.
Comments are closed.