ಕರಾವಳಿ

ಪಿಲಿಕುಳ ನಿಸರ್ಗಧಾಮ – ಮಕ್ಕಳಿಗೆ ಬೇಸಿಗೆ ಶಿಬಿರಕ್ಕೆ ಅಹ್ವಾನ

Pinterest LinkedIn Tumblr

ಮಂಗಳೂರು ; ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಹತ್ತು ದಿನಗಳ ರಜಾ ಮಜಾ ‘ಪಿಲಿಕುಳ ಬೇಸಿಗೆ ಶಿಬಿರ-2020’ ನ್ನು ಎಪ್ರಿಲ್ 20 ರಿಂದ 29 ರವರೆಗೆ ನಡೆಸಲಾಗುವುದು.

ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ಪಿಲಿಕುಳದ ಎಲ್ಲಾ ವಿಭಾಗಗಳ ಪ್ರವೇಶಕ್ಕೆ ಅವಕಾಶವಿದ್ದು,  ಮಂಗಳೂರಿ ನಿಂದ ಆಗಮಿಸುವವರಿಗೆ ಬಸ್ಸಿನ ವ್ಯವಸ್ಥೆಯಿರುತ್ತದೆ. 2 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಬಹುದು.

ಶಿಬಿರದಲ್ಲಿ ಜನಪದ ಹಾಡು ಮತ್ತು ಕುಣಿತ, ಸಂಗೀತ, ಯಕ್ಷಗಾನ ಮುಖವರ್ಣಿಕೆ, ಕುಶಲಕರ್ಮಿಗಳ ಜೊತೆ ತರಬೇತಿ, ಗಿಡಮೂಲಿಕೆಗಳ ಪರಿಚಯ, ಎಲೆಗಳಲ್ಲಿ ಕೊಲಾಜ್, ಕೌಶಲ್ಯ ತರಬೇತಿ, ಮನೋರಂಜನಾ ಆಟಗಳು, ಸ್ವರ ವ್ಯಾಯಾಮ, ಕ್ರಿಯೇಟಿವ್ ಆರ್ಟ್, ರಂಗ ವ್ಯಾಯಾಮ, ಮುಖವಾಡ ರಚನೆ, ಅಭಿನಯ ಗೀತೆ, ಕ್ಲೇ ಮೋಡಲ್, ಮೈಮ್, ಮಿಮಿಕ್ರಿ, ಕಥೆ ರಚನೆ, ನಾಟಕ, ವರ್ಲಿ ಕಲೆ, ಹಾಡುಗಳು, ಗೊಂಬೆ ತಯಾರಿಕೆ, ಜಾದೂ, ಪರಿಸರ ವೀಕ್ಷಣೆ ಮತ್ತು ಸಂರಕ್ಷಣೆ, ವಿಜ್ಞಾನ ಕೌತುಕಗಳನ್ನು ಪರಿಚಯಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಪಿಲಿಕುಳದ ಆಡಳಿತ ಕಛೇರಿ ಸಂಖ್ಯೆ 0824-2263565, 7892306404 ಅಥವಾ www.pilikula.com ನ್ನು ಸಂಪರ್ಕಿಸಲು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Comments are closed.