ಮಂಗಳೂರು ; ನಗರದ ಕೊಂಚಾಡಿಯಲ್ಲಿರುವ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ವಿದ್ಯಾರ್ಥಿಗಳ ತಾಯಂದಿರು ನಾನಾ ಸಾಂಸ್ಕೃತಿಕ ಪ್ರದರ್ಶನವನ್ನು ಆಯೋಜಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದರು.
ವಿದ್ಯಾರ್ಥಿಗಳ ತಾಯಂದಿರು ತಮ್ಮ ಮಕ್ಕಳೊಂದಿಗೆ ನೃತ್ಯ, ಹಾಡುಗಾರಿಕೆ ಸೇರಿದಂತೆ ನಾನಾ ರೀತಿಯ ಪ್ರದರ್ಶನವನ್ನು ನೀಡಿದರು. ಈ ಮೂಲಕ ವಿದ್ಯಾರ್ಥಿಗಳ ತಾಯಂದಿರಿಗೆ ತಮ್ಮ ಮಕ್ಕಳೊಂದಿಗೆ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡಲಾಗಿತ್ತು.
ಎಲ್ಲ ವಿದ್ಯಾರ್ಥಿಗಳ ತಾಯಂದಿರುವ ತಮ್ಮ ದೈನಂದಿನ ಒತ್ತಡದ ನಡುವೆಯೂ ಒಂದೆಡೆ ಸೇರಿಸಿ ಮಹಿಳಾ ದಿನಾಚರಣೆಯನ್ನು ಆಚರಿಸಿದರು. ಈ ಕರ‍್ಯಕ್ರಮಕ್ಕೆ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ಸ್ಥಾಪಕಿ, ನಿರ್ದೇಶಕಿ ಪ್ರೊ| ಹಿಲ್ಡಾ ರಾಯಪ್ಪನ್ ಚಾಲನೆ ನೀಡಿದ್ದರು.
ಬಳಿಕ ಪ್ರದರ್ಶನ ನೀಡಿದ ತಾಯಂದಿರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಹೋರಾಟ ನಡೆಸಿ ನಾನಾ ಪುರಸ್ಕಾರ ಪಡೆದ ಪ್ರೊ.ಹಿಲ್ಡಾ ರಾಯಪ್ಪನ್ ಅವರನ್ನು ಅಭಿನಂದಿಸಲಾಯಿತು. ಕರ‍್ಯಕ್ರಮದ ಪೂರ್ವದಲ್ಲಿ ಸಂಸ್ಥೆಯ ವಿದ್ಯಾರ್ಥಿಯರಿಂದ ಸಾಂಸ್ಕೃತಿಕ ಕರ‍್ಯಕ್ರಮ ಆಯೋಜಿಸಲಾಗಿತ್ತು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹೆಸರಿನಲ್ಲಿ ನಮಗೆ ತಮ್ಮ ಮಕ್ಕಳೊಂದಿಗೆ ಸಾಂಸ್ಕೃತಿಕ ಪ್ರದರ್ಶನ ನೀಡಲು ಮತ್ತು ಇತರ ಮಕ್ಕಳ ತಾಯಾಂದಿರೊಂದಿಗೆ ಸೇರಿ ಸಾಂಸ್ಕೃತಿಕ ಪ್ರದರ್ಶನ ನೀಡಲು ಸಂಸ್ಥೆಯು ಅವಕಾಶ ನೀಡಿರುವ ಸಂಸ್ಥೆಯ ಆಡಳಿತ ಮಂಡಳಿಯ ನಡೆಗೆ ತಾಯಂದಿರು ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಕರ‍್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲ ಪೋಷಕರು ಒಂದೆಡೆ ಸೇರಲು ಅವಕಾಶವಾಗುತ್ತದೆ. ಪರಸ್ಪರ ಚರ್ಚಿಸಲು ವೇದಿಕೆಯಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ. ಎಂ.ಎಸ್. ರವಿ, ಸಮಿತಿ ಸದಸ್ಯ ಸದಾಶಿವ ಕಾಮತ್, ಕೋಶಾಧಿಕಾರಿ ಸುಮನಾ ಕಾಮತ್, ಆಡಳಿತಾಧಿಕಾರಿ ಶಿಲ್ಪಾ ಶೇಟ್, ಪ್ರಾಂಶುಪಾಲೆ ಆಶಾಪ್ರಿಯಾ ಉಪಸ್ಥಿತರಿದ್ದರು
Comments are closed.