ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ /ಜಿಲ್ಲಾ ದಂಡಾಧಿಕಾರಿ ಆದೇಶದ ಮೇರೆಗೆ ಕೊರೊನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರಿನ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ 25.03.2020 ರಿಂದ 10 ದಿನಗಳ ಪರ್ಯಂತ ನಡೆಯುವ ಯುಗಾದಿ ಮಹೋತ್ಸವದಲ್ಲಿ/ಸಂತರ್ಪಣೆಯಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಜಿಲ್ಲಾಡಳಿತ ನಿರ್ಬಂಧಿಸಿರುವುದರಿಂದ ಪರಿಸ್ಥಿಯ ಗಂಭೀರತೆಯನ್ನು ಭಕ್ತಾದಿಗಳು ಅರ್ಥೈಸಿಕೊಂಡು ಸಹಕರಿಸಬೇಕಾಗಿ ವಿನಮ್ರ ವಿನಂತಿ.
ಪ್ರತೀ ದಿನ ಸಾಂಕೇತಿಕ ಉತ್ಸವ, 9ನೇ ಉತ್ಸವದಂದು ಶ್ರೀ ದೇವರಿಗೆ ಮಾತ್ರ ಅವಭ್ರತ ನಡೆಯಲಿದೆ. ಯಾರೂ ಕೂಡ *ಸಾರ್ವಜನಿಕ ವಾಗಿ ಓಕುಳಿ* ಹಾಕುವಂತಿಲ್ಲ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದಿಲ್ಲ. ಯುಗಾದಿ ಸಂದರ್ಭದಲ್ಲಿ ಪ್ರತಿ ದಿನ ಸಂಜೆ ಗಂಟೆ 4.45 ಕ್ಕೆ ಶ್ರೀ ಗುರುಮಠ ದಿಂದ ಹೊರಟು ರಾತ್ರಿ 8 ಗಂಟೆ ಒಳಗೆ ಉತ್ಸವ ಸರಳ ರೀತಿಯಲ್ಲಿ ಈ ಬಾರಿ ನಡೆಯಲಿದೆ.
(ಬೀದಿ ಸವಾರಿಯೂ ನಡೆಸುವಂತಿಲ್ಲ ) ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ತಂಗಲು ಅವಕಾಶ ಇರುವುದಿಲ್ಲ. ದೈವದ ಕೋಲದ ದಿನ ಕೋಲವು ಕಟ್ಟು ಕಟ್ಟಳೆಯಂತೆ ಮಾತ್ರ ನಡೆಯಲಿದೆ.
ಕೊರೊನ ಮಾರಕ ಸೋಂಕನ್ನು ತಡೆಗಟ್ಟಲು ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ನಮ್ಮ ಕ್ಷೇತ್ರದಲ್ಲೂ ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿಯುತ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರಕ್ಕೆ ಒಳಪಟ್ಟಿರುವ ಎಲ್ಲಾ ಕೂಡುವಳಿಕೆ ಮೊಕ್ತೇಸರರು, ಸದಸ್ಯರು ಹತ್ತು ಸಮಸ್ತರು ಸಂಘ ಸಂಸ್ಥೆಯವರು ಎಲ್ಲಾ ಸೇವಾ ಕರ್ತರು ದಾನಿಗಳು ಊರ ಪರವೂರ ಭಕ್ತಾದಿಗಳು ಸಹಕರಿಸಬೇಕಾಗಿ ಈ ಮೂಲಕ ವಿನಂತಿಸುತ್ತೇವೆ ಎಂದು ಕ್ಷೇತ್ರದ ಆಡಳಿತ ಮಂಡಳಿಯ ಪರವಾಗಿ ಆಡಳಿತ ಮೊಕ್ತೇಸರ್ .ಕೆ. ಕೇಶವ ಆಚಾರ್ಯ ಅವರು ಮಾಧ್ಯಮ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.
Comments are closed.