ಮಂಗಳೂರು ಮಾರ್ಚ್ 21 : ಕರ್ನಾಟಕ ರಾಜ್ಯದಲ್ಲಿ ಕೊರೋನಾ ವ್ಶೆರಸ್ ಹರಡದಂತೆ ಸಾರಿಗೆ ಇಲಾಖಾ ವತಿಯಿಂದ ಸರಕಾರದ ವಿವಿಧ ಸೇವೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಕಚೇರಿಗಳಿಗೆ ಭೇಟಿ ನೀಡುವುದು ಹಾಗೂ ಏಕ ಕಾಲದಲ್ಲಿ ಒಟ್ಟಿಗೆ ಸೇರುವಂತಹ ಸಂದರ್ಭ ಉಂಟಾಗಿ ವೈರಾಣು ಹರಡಲು ಅನುಕೂಲ ವಾತಾವರಣ ಮಾಡಿಕೊಟ್ಟಂತಾಗಿದೆ.
ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಗೂ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಪ್ರಾದೇಶಿಕ ಸಾರಿಗೆ ಕಚೇರಿ ಮಂಗಳೂರು, ಪುತ್ತೂರು ಹಾಗೂ ಬಂಟ್ವಾಳ ಕಚೇರಿಗಳಲ್ಲಿ ದೈನಂದಿನ ಕೆಲಸ ಕಾರ್ಯಗಳನ್ನು ಮೊಟಕುಗೊಳಿಸಲಾಗಿದೆ.
ವಾಹನ ಚಾಲನಾ ಕಲಿಕಾ ಅನುಜ್ಞಾ ಪತ್ರ ನೀಡಿಕೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ವಾಹನ ಚಾಲನಾ ಖಾಯಂ ಅನುಜ್ಞಾ ಪತ್ರ ನೀಡಿಕೆ-ಎಪ್ರಿಲ್ 15 ರ ವರೆಗೆ ಸಿಂಧುತ್ವ ಹೊಂದಲಿರುವ ಕಲಿಕಾ ಚಾಲನಾ ಅನುಜ್ಞಾ ಪತ್ರಗಳ ಅಭ್ಯರ್ಥಿಗಳು ಮಾತ್ರ ಕಾಯಂ ಚಾಲನಾ ಅನುಜ್ಞಾ ಪತ್ರಗಳಿಗೆ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗಿದೆ.
ಮಾರ್ಚ್ 20ರಿಂದ ಮುಂದಿನ ಆದೇಶದವರೆಗೆ ಯಾವುದೇ ಕಲಿಕಾ ಚಾಲನಾ ಅನುಜ್ಞಾ ಪತ್ರ ಮತ್ತು ಖಾಯಂ ಚಾಲನಾ ಅನುಜ್ಞಾ ಪತ್ರಗಳಿಗಾಗಿ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳನ್ನು ನಿರ್ಬಂಧಿಸಲಾಗಿದೆ. ವಾಹನ ಚಾಲನಾ ಅನುಜ್ಞಾ ಪತ್ರದ ನವೀಕರಣ-ನಿಬಂಧವು ಅನ್ವಯಿಸುದಿಲ್ಲ ಎಂದು ಮಂಗಳೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
Comments are closed.