ಮಂಗಳೂರು ಮಾರ್ಚ್ 21 :ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಉತ್ತರ ವಿಧಾನ ಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ ಇವರ 2018-19ನೇ ಸಾಲಿನ ಅನುದಾನದ ಬಿಡುಗಡೆಯಾಗಿದೆ.
ಅನುದಾನದಲ್ಲಿ ಕುಂಜತ್‍ಬೈಲ್ ಉತ್ತರ ಜ್ಯೋತಿನಗರ ಹನುಮಾನ್ ದೇವಸ್ಥಾನದ ಹತ್ತಿರ ಮನೆ ನಂ. 3-321 ಹನುಮಂತರವರ ಮನೆ ಬಳಿ ಸಾರ್ವಜನಿಕ ಮೆಟ್ಟಿಲು ರಚನೆಗೆ ರೂ. 3 ಲಕ್ಷ, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿ ವಾರ್ಡ್ ನಂ.19 ರ ಪಚ್ಚನಾಡಿ ಗ್ರಾಮದ ಪಚ್ಚನಾಡಿ ಬೊಟ್ಟು ರಸ್ತೆ ದುರಸ್ಥಿ ಕಾಮಗಾರಿಗೆ ರೂ. 84,000, ಮೂಳೂರು ಮುಂಡಿತ್ತಾಯ ವೈದ್ಯನಾಥ ದೇವಸ್ಥಾನದ ಇಂಟರ್‍ಲಾಕ್ ಅಳವಡಿಕೆ ಮುಂದುವರಿದ ಕಾಮಗಾರಿಗೆ ರೂ 2 ಲಕ್ಷ, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿ ನಂ.13 ಕುಂಜತ್‍ಬೈಲ್ ಉತ್ತರ ಜ್ಯೋತಿನಗರ ಹನುಮಾನ್ ದೇವಸ್ಥಾನದ ಹತ್ತಿರದ ಮನೆ ನಂ. 3-321 ಹನುಮಂತರವರ ಮನೆ ಬಳಿ ಸಾರ್ವಜನಿಕ ಮೆಟ್ಟಿಲು ರಚನೆಗೆ ರೂ 5 ಲಕ್ಷ, ಅಡ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವೃಕ್ಷರಾಜ ಫ್ರೆಂಡ್ಸ ಕ್ಲಬ್ ಗ್ರಾಮೀಣ ಅಭಿವೃದ್ಧಿ ಕೇಂದ್ರ (ರಿ) ಅಡ್ಯಾರು ಪದವು ಇದರ ಕಟ್ಟಡ ಕಾಮಗಾರಿಗೆ ರೂ 4 ಲಕ್ಷ ಮಂಜೂರು ಮಾಡಲಾಗಿದೆ.
2019-20 ನೇ ಸಾಲಿನ ಅನುದಾನದಲ್ಲಿ ಮಂಗಳೂರು ತಾಲೂಕು ನೀರುಮಾರ್ಗ ಗ್ರಾಮಪಂಚಾಯತ್ ವ್ಯಾಪ್ತಿಯ ಬೊಡಂತಿಲ ಗುತ್ತು ರಸ್ತೆ ಕಾಮಗಾರಿಗೆ ರೂ. 5 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
Comments are closed.