ಕರಾವಳಿ

ಇಂದು ಸಂಜೆ 124 ಚರ್ಚ್ ಗಳಲ್ಲಿ ಏಕಕಾಲದಲ್ಲಿ ಚರ್ಚ್ ಗಂಟೆ ಬಾರಿಸುವ ಮೂಲಕ ಜನತಾ ಕರ್ಫ್ಯೂಗೆ ಬೆಂಬಲ

Pinterest LinkedIn Tumblr

ಮಂಗಳೂರು,ಮಾರ್ಚ್.22: ಜನತಾ ಕರ್ಫ್ಯೂಗೆ ಸಂಬಂಧಪಟ್ಟಂತೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಅವರು ಧರ್ಮಪ್ರಾಂತ್ಯದ ೧೨೪ ಚರ್ಚ್ ಗಳಲ್ಲಿ ಸಂಜೆ ಐದಕ್ಕೆ ಏಕಕಾಲದಲ್ಲಿ ಚರ್ಚ್ ಗಂಟೆ ಬಾರಿಸುವಂತೆ ಕರೆ ನೀಡುವ ಮೂಲಕ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದಾರೆ.

ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟ ಜನತಾ ಕರ್ಫ್ಯೂಗೆ ಸಂಬಂಧಪಟ್ಟಂತೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಅವರು ಧರ್ಮಪ್ರಾಂತ್ಯದ 124 ಚರ್ಚ್ ಗಳಲ್ಲಿ ಸಂಜೆ ಐದಕ್ಕೆ ಏಕಕಾಲದಲ್ಲಿ ಚರ್ಚ್ ಗಂಟೆ ಬಾರಿಸುವ ಮೂಲಕ ಕೊರೊನಾ ವೈರಸ್ ಭಯದ ವಾತಾವರಣ ನಡುವೆಯು ಕೂಡ ರೋಗಿಗಳ ಪರವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು ಹಾಗೂ ಪ್ಯಾರಾ ಮೆಡಿಕಲ್‌ ಸೇವೆಸಲ್ಲಿಸುತ್ತಿರುವ ಮಂದಿಯ ಕೆಲಸವನ್ನು ಸ್ಮರಿಸುವ ಜತೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುವ ಕೆಲಸ ಸಾಗಲಿದೆ.

ಇದರ ಜತೆಗೆ ಏರ್ಲೈನ್ಸ್ ಹಾಗೂ ಸಂಚಾರ ವ್ಯವಸ್ಥೆ ಯಲ್ಲೂ ಕೆಲಸ ಮಾಡುವ ಕೆಲಸಗಾರರ ಕೆಲಸವನ್ನು ಸ್ಮರಿಸಲಾಗುವುದು ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಪಿಆರ್ ಒ ಫಾ.ವಿಜಯ್ ವಿಕ್ಟರ್ ಲೋಬೊ ಅವರ ಪತ್ರಿಕಾ ಪ್ರಕಟಣೆ ತಿಳಿಸಿದೆ.

Comments are closed.