ಮಂಗಳೂರು : ಕೊರೋನ ವೈರಸ್‌ನಿಂದ ಪಾರಾಗಲು ಇರುವ ಯೋಗ್ಯ ಮಾರ್ಗ ಜನತಾ ಕರ್ಫ್ಯೂ ಎಂಬುದು ಸತ್ಯ. ನಮ್ಮನ್ನು ಹಾಗೂ ದೇಶವನ್ನು ರಕ್ಷಿಸುವ ಜೊತೆಗೆ ಜಗತ್ತಿನ ಹಿತವನ್ನು ಕಾಪಾಡುವಲ್ಲಿ ನಮಗೆ ನಾವೇ ವಿಧಿಸುವ ರಾಷ್ಟ್ರಮುಖಿ ಚಿಂತನೆ ಇದಾಗಿದೆ. ಈ ದಿಸೆಯಲ್ಲಿ ಕೇಂದ್ರ ಘನ ಸರಕಾರ, ರಾಜ್ಯ ಸರಕಾರ, ಜಿಲ್ಲಾಡಳಿತದ ಯಾವತ್ತೂ ಮಾರ್ಗದರ್ಶನಗಳನ್ನು ಸ್ವಯಂ ಪಾಲಿಸೋಣ, ಬೆಂಬಲಿಸೋಣ, ಈ ರೀತಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಮ್ಮದೇ ಆದ ಸ್ತರದಲ್ಲಿ ಪ್ರಯತ್ನಿಸೋಣವೆಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
ಸಾಂಸ್ಕೃತಿಕ ನೆಲೆಯ ಶಿಕ್ಷಣವಾದ ಸಂಗೀತ, ಭರತನಾಟ್ಯ, ಯಕ್ಷಗಾನ, ವಾದ್ಯಸಂಗೀತ, ಇತ್ಯಾದಿ ತರಬೇತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಒಂದಷ್ಟು ಕಾಲ ಸ್ಥಗಿತಗೊಳಿಸುವುದು ಸೂಕ್ತ. ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ತಮ್ಮ ತಮ್ಮ ಮನೆಗಳಲ್ಲಿಯೇ ಮಾಡುವುದಕ್ಕೆ ಇಂದಿನ ವಿದ್ಯುನ್ಮಾನ ಪರಿಕರಗಳು ಹೆಚ್ಚು ಸಹಕಾರಿಯಾದೀತು, ಈ ನೆಲೆಯಲ್ಲಿ ಕಲಾಗುರುಗಳು, ಪೋಷಕರೂ ಕೂಡ ತಮ್ಮ ಬದ್ಧತೆಯನ್ನು ಪ್ರದರ್ಶಿಸುವಂತೆ ಕಲ್ಕೂರ ಕರೆನೀಡಿರುವರು.
Comments are closed.