ಮಂಗಳೂರು, ಮಾರ್ಚ್.23: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಇಂದಿನಿಂದ ಮಾರ್ಚ್ 31ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಮಾ.22ರ ಮಧ್ಯರಾತ್ರಿ 12 ಗಂಟೆಯಿಂದ ಮಾ.31ರವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಲಾಕ್ ಡೌನ್ ಹಿನ್ನೆಲೆ : ಮಂಗಳೂರಿನಲ್ಲಿ ಏನಿರುತ್ತೆ? – ಏನಿರಲ್ಲ?
ಹಾಲು, ಮೊಸರು, ಪೇಪರ್, ಮೆಡಿಕಲ್, ಆಸ್ಪತ್ರೆ ಮತ್ತು ದಿನಸಿ, ಬ್ಯಾಂಕ್, ಮಾಂಸ, ಪೆಟ್ರೋಲ್ ಪಂಪ್ ಸೇರಿ ಅಗತ್ಯ ವಸ್ತುಗಳು
ಹೊಟೇಲ್ ನಿಂದ ಪಾರ್ಸೆಲ್ ಗೆ ಮಾತ್ರ ಅವಕಾಶ
ಇಂದಿನಿಂದ ಮಂಗಳೂರಿನಲ್ಲಿ ಏನಿರಲ್ಲ?
ದ.ಕ ಜಿಲ್ಲೆಯಾದ್ಯಂತ ಖಾಸಗಿ ಬಸ್ ಸಂಚಾರ ಸ್ಥಗಿತ
ಸರ್ಕಾರಿ ಬಸ್ ಸೇವೆಯೂ ಸಂಪೂರ್ಣ ಸ್ತಬ್ಧ
ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಚಿತ್ರಮಂದಿರ, ದಿನಸಿ ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟು ಬಂದ್
ಮೀನುಗಾರಿಕೆ, ಪ್ರವಾಸೋದ್ಯಮ, ದೇವಸ್ಥಾನ ಸಂಪೂರ್ಣ ಬಂದ್
ರಸ್ತೆಯಲ್ಲಿ ವಾಹನ ಓಡಾಟ, ಮನೆಯಿಂದ ಜನರ ಹೊರಬರುವಿಕೆಗೆ ಬ್ರೇಕ್
ಶಾಲಾ-ಕಾಲೇಜು ಸಂಪೂರ್ಣ ಬಂದ್, ಸರ್ಕಾರಿ ಕಚೇರಿ ಸಾರ್ವಜನಿಕ ಪ್ರವೇಶ ನಿಷೇಧ
ಹೊಟೇಲ್, ರೆಸ್ಟೋರೆಂಟ್, ಪಬ್, ಪೆಟ್ರೋಲ್ ಪಂಪ್ ಸೇರಿ ಮದ್ಯ ಮಾರಾಟವೂ ಬಂದ್.
Comments are closed.