ಕರಾವಳಿ

ಲಾಕ್ ಡೌನ್ ತೀವ್ರ- ಆದರೆ ದಿನ ಬಳಕೆ ವಸ್ತುಗಳ ಅಂಗಡಿಗಳನ್ನು ಮುಚ್ಚುವುದಿಲ್ಲ: ಡಿಸಿ ಸ್ಪಷ್ಟನೆ

Pinterest LinkedIn Tumblr

ಮಂಗಳೂರು, ಮಾರ್ಚ್ 25 : ನಾಳೆಯಿಂದ ಜನರು ರಸ್ತೆಗೆ ಕಾಲಿಡುವಂತಿಲ್ಲ. ಜನರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನಾವೇ ಮನೆಗೆ ತಲುಪಿಸುತ್ತೇವೆ ಎಂಬ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ಬೆನ್ನಲೇ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು, ನಾಳೆ ಕೂಡ ದಿನ ಬಳಕೆ ವಸ್ತುಗಳ ಅಂಗಡಿಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಯ ನಿಯಂತ್ರಣ ಸಂಬಂಧ ಲಾಕ್ ಡೌನ್ ತೀವ್ರಗೊಳಿಸಲಾಗಿದೆ. ಜನತೆ ಮನೆಯಿಂದ ಹೊರಗಡೆ ಬರದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಆದರೆ ದಿನ ಬಳಕೆ ವಸ್ತುಗಳ ಅಂಗಡಿಗಳನ್ನು ಮುಚ್ಚುವುದಿಲ್ಲ ದಿನ ಬಳಕೆ ವಸ್ತುಗಳ ಅಂಗಡಿ ತೆರೆದಿರುತ್ತದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12ರ ತನಕ ದಿನ ಬಳಕೆ ವಸ್ತುಗಳ ಅಂಗಡಿ ತೆರೆದಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ದಿನಬಳಕೆಯ ಸಾಮಾಗ್ರಿ ತರುವ ವಾಹನಗಳಿಗೆ ಯಾವುದೇ ತಡೆ ಇಲ್ಲ. ಜನರು ಮುಗಿಬಿದ್ದು ಖರೀದಿಸುವ ಅಗತ್ಯತೆ ಇಲ್ಲ ಎಂದಿರುವ ಅವರು ಮನೆ ಮನೆಗೆ ದಿನ ನಿತ್ಯದ ಸಾಮಾಗ್ರಿ ತಲುಪಿಸುವ ನಿರ್ಧಾರ ಜಿಲ್ಲಾಡಳಿತ ಇಲ್ಲಿಯ ತನಕ ಜಾರಿಗೆ ತಂದಿಲ್ಲ ಎಂದಿದ್ದಾರೆ.

ಇನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿರುವಂತೆ ಮನೆ ಮನೆಗಳಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಬಗ್ಗೆ ಚರ್ಚೆ ನಡೆಸಲಾಗುವುದು. ಈ ಬಗ್ಗೆ ಇನ್ನು ಅಂತಿಮ ನಿರ್ಧಾರವಾಗಿಲ್ಲ.ಈ ಹಿನ್ನೆಲೆಯಲ್ಲಿ ಎಂದಿನಂತೆ ಅಂಗಡಿ ತೆರೆದಿರುತ್ತದೆ ಹಾಗೂ ಜನ ಖರೀದಿಗೆ ಮುಗಿಬಿದ್ದು ಖರೀದಿಸುವ ಅಗತ್ಯತೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

Comments are closed.