ಕರ್ನಾಟಕ ಮಹಾಮಂಡಳ ಮೀರಾ-ಭಾಯಂಧರ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ
ಮುಂಬಯಿ: ಸಮಾಜ ಅದೆಷ್ಟು ಮುಂದುವರಿದರೂ ಮಹಿಳೆಯರ ಮೇಲಿನ ದೌರ್ಜನ್ಯ ಇನ್ನೂ ಕಡೆಮೆಯಾಗಿಲ್ಲ. ಮಹಿಳೆಯರು ತಮ್ಮ ಸುರಕ್ಷತೆಯನ್ನು ತಾವೇ ಕಾಪಾಡುವಂತಾಗಬೇಕು ಎಂದು ಲೇಖಕಿ ಲತಾ ಸಂತೋಷ್ ಶೆಟ್ಟಿ ಅಭಿಪ್ರಾಯಪಟ್ಟರು.
ಇತ್ತೀಚಿಗೆ ಬಾಯಂಧರ್ ಪೂರ್ವ ನವಘರ್ ರೋಡ್ ಎಂ.ಬಿ.ಎಮ್.ಸಿ. ಇಲ್ಲಿ ಕರ್ನಾಟಕ ಮಹಾಮಂಡಳ ಮೀರಾ-ಭಾಯಂಧರ್ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ, ಅರಸಿನ ಕುಂಕುಮ ಹಾಗೂಜಾನಪದ ನೃತ್ಯ್ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಲತಾ ಸಂತೋಷ್ ಶೆಟ್ಟಿ ನಮ್ಮ ರಕ್ಷಣೆಗೆ ನಾವೇ ಪ್ರಥಮ ಆಧ್ಯತೆ ನೀಡೋಣ. ಇಂದಿನ ಮಹಿಳೆಯರು ಹಿಂಜರಿಯದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದು ನಾವು ನಾರಿ ಶಕ್ತಿಯನ್ನು ಪ್ರತಿಬಿಂಬಿಸುದರೊಂದಿಗೆ ಮಹಿಳೆಯರು ಪುರುಷರಿಗೆ ಸರಿ ಸಮಾನರು ಎಂಬುದನ್ನು ತೋರಿಸುತ್ತಿರುವರು. ಇಂದು ದಾಂಪತ್ಯ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಮೂರು ದಂಪತಿಗಳನ್ನು ಸನ್ಮಾನಿಸಿದ್ದು ಇದರಿಂದ ನವ ದಂಪತಿಗಳಿಗೆ ಹಿರಿಯರ ದಾಂಪತ್ಯ ಬಂಧನದ ಬಂಧುತ್ವದ ಪ್ರೇರಣೆ ದೊರಕುವುದು ಎಂದರು.
ಗೌರವ ಅತಿಥಿ ಸರೋಜಿನಿ ವಾಸುದೇವ ಪೂಜಾರಿ ಇವರು ಮಾತನಾಡುತ್ತಾ ಮಹಿಳೆಯರು ಶ್ರಮಜೀವಿಗಳು. ಮಹಿಳೆಯರು ಪ್ರೀತಿ, ಪ್ರೇಮ, ಕರುಣೆಯನ್ನು ತನ್ನಲ್ಲಿ ಅಳವಡಿಸಿಕೊಂಡಿರುದರಿಂದ ಆಕೆಗೆ ವಿಶ್ವದಲ್ಲಿ ಸ್ಥಾನಮಾನವಿದೆ.
ಇನ್ನೋರ್ವ ಗೌರವ ಅತಿಥಿ ವಸಂತಿ ಎಸ್ ಶೆಟ್ಟಿಯವರು ಮಾತನಾಡಿ ಹಿಂದಿನ ಕಾಲದ ಮಹಿಳೆಯರಿಗೂ ಈಗಿನ ಮಹಿಳೆಯರಿಗೂ ಬಹಳಷ್ಟು ವ್ಯತ್ಯಾಸವಿದ್ದು, ಮೊದಲಿನ ಮಹಿಳೆಯರು ಮನೆಯಿಂದ ಹೊರಬಾರದೆ ಸಂಸಾರದ ಸೇವೆಯಲ್ಲಿ ಇರುತ್ತಿದ್ದರೆ ಈಗ ಮಹಿಳೆಯರು ಸಮಾಜದ ಪ್ರತಿಯೊಂದಿ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಇದಕ್ಕೆ ಇಂದಿನ ಕಾರ್ಯಕ್ರಮವು ಒಂದು ಉದಾಹರಣೆಯಾಗಿದೆ ಎನ್ನುತ್ತಾ ಸುನಂದಾ ಕಣಾಂಜಾರ್ ಇವರ ನೇತೃತ್ವದಲ್ಲಿ ಈ ಮಹಿಳಾ ವಿಭಾಗವು ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದರು.
ಕರ್ನಾಟಕ ಮಹಾಮಂಡಳ ಮೀರಾ-ಭಾಯಂಧರ್ ನ ಗೌರವ ಅಧ್ಯಕ್ಷರಾದ ಡಾ. ಅರುಣೋದಯ ಎಸ್. ರೈ ಬೆಳಿಯೂರು ಗುತ್ತು ಮಾತನಾಡುತ್ತಾ ದಾಂಪತ್ಯ ಜೀವನದಲ್ಲಿ ಸುವರ್ಣಮಹೋತ್ಸವವನ್ನಾಚರಿಸುವ ಹಿರಿಯ ದಂಪತಿಗಳನ್ನು ಸನ್ಮಾನಿಸುತ್ತಿರುವುದು ಹಾಗೂ ಮಹಿಳಾ ಸದಸ್ಯರ ಕಾರ್ಯ ಸ್ಲಾಘನೀಯ ಎಂದರು. ರೇಖಾ ರಾವ್ ಮತ್ತು ನಿಖಿತಾ ಅಮೀನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಾ ಸೂಕ್ತ ಸಲಹೆಯಿತ್ತರು.
ಕರ್ನಾಟಕ ಮಹಾಮಂಡಳ ದ ಮಹಿಳಾ ಸದಸ್ಯರಿಂದ ಭಜನೆ ಹಾಗೂ ವಿವಿಧ ವಿನೋದಾವಳಿ ಕಾರ್ಯಕ್ರಮಗಳು ನಡೆಯಿತು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ಬಂಟ್ಸ್ ಫೋರಂ ಮೀರಾ ಬಾಯಂಧರ್, ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ ಬಾಯಂಧರ್, ತುಳುನಾಡ ಸಮಾಜ ಮೀರಾ ಬಾಯಂಧರ್, ಯುವ ಮಿತ್ರ ಮಂಡಳಿ ಬಾರತೀ ಪಾರ್ಕ್, ಶ್ರೀ ಶನೀಶ್ವರ ಸೇವಾ ಸಮಿತಿ ಮೀರಾರೋಡ್ ಮತ್ತು ಶ್ರೀ ಕಟಿಲೇಶ್ವರಿ ಭಜನಾ ಸಮಿತಿ ಬಾಯಂಧರ್ ಇದರ ಸದಸ್ಯರು ಭಾಗವಹಿಸಿದ್ದು, ಸ್ಪರ್ಧೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ ಬಾಯಂಧರ್ ಪ್ರಥಮ ಬಹುಮಾನ, ಯುವ ಮಿತ್ರ ಮಂಡಳಿ ಬಾರತೀ ಪಾರ್ಕ್. ದ್ವೀತೀಯ ಬಹುಮಾನ, ಬಂಟ್ಸ್ ಫೋರಂ ಮೀರಾ ಬಾಯಂಧರ್,ತೃತೀಯ ಬಹುಮಾನ ಪಡೆಯಿತು.
ಜಾಗತಿಕ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಲತಾ ಸಂತೋಷ್ ಶೆಟ್ಟಿ ಇವರ ಮಾತಾ ಪಿತರ ವೈವಾಹಿಕ ಜೀವನದ ಸುವರ್ಣ ಮಹೋತ್ಸವದ ಅಂಗವಾಗಿ ದಾಂಪತ್ಯ ಜೀವನದಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ರಾಜಶೇಖರ ಕೆ ಮೂಲ್ಕಿ ಮತ್ತು ನಾಗಮ್ಮ ಆರ್ ಮೂಲ್ಕಿ, ನಾರಾಯಣ ಸಿ ಶೆಟ್ಟಿ ಅತ್ತು ಸಂಪಾ ಶೆಟ್ಟಿ, ಗೋಪಾಲ ರಾಮ ಕುಂದರ್ ಮತ್ತು ಸೀತಾ ಗೋಪಾಲ ಕುಂದರ್ ದಂಪತಿಗಳನ್ನು ಸನ್ಮಾನಿಸಲಾಯಿತು. ಮಂಡಳದ ಮಹಿಳಾ ವಿಭಾಗದ ಕಾರ್ಯದರ್ಶಿ ನಯನಾ ಆರ್ ಶೆಟ್ಟಿಯವರನ್ನು ಮಹಿಳಾ ವಿಭಾಗ ಮತ್ತು ಭಜನಾ ಸಮಿತಿಗೆ ಅವರು ನೀಡಿರುವ ಯೋಗದಾನವನ್ನು ಗುರುತಿಸಿ ವಿಶೇಷವಾಗಿ ಗೌರವಿಸಲಾಯಿತು. ಶ್ರೀ ದುರ್ಗಾಪರಮೇಶ್ವರಿ ಭಕ್ತವೃಂದ ಟ್ರಷ್ಟ್ ಇಂದ್ರಲೋಕ ಇದರ ಧರ್ಮದರ್ಶಿ ಹರೀಶ್ ಎಂ ಸಾಲ್ಯಾನ್ ಮತ್ತು ಲಕ್ಷಿ ಎಚ್ ಸಾಲ್ಯಾನ್ ಇವರ ದಾಂಪತ್ಯ ರಜತ ಮಹೋತ್ಸವದ ಅಂಗವಾಗಿ ಗೌರವಿಸಲಾಯಿತು. ವಾರಿಜ ಶ್ರೀಯಾನ್ ಇವರ ಪ್ರಾಯೋಜಕತ್ವದಲ್ಲಿ ವಿವಿಧ ಕ್ಷೇತ್ರಗಳ ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು.
ಮಂಡಳದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಸುಮಂಗಳಾ ಅಶೋಕ್ ಕಣಂಜಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಹಿಳೆಯರು ಒಗ್ಗಟ್ಟು, ಏಕತೆಯಿಂದ ಒಂದು ಸುಂದರ ಮನೆಯಂತೆ, ಸಮಾಜ ಸಂಘಟನೆಯನ್ನು ಉತ್ತಮ ರೀತಿಯಲ್ಲಿ ನಡೆಸಲು ಪ್ರೇರಣೆ ನೀಡುವಂತೆ ಈ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದು, ಇದೇ ರೀತಿ ನಿಮ್ಮೆಲ್ಲರ ಪ್ರೀತಿ ಮುಂದುವರಿಯುತ್ತಿರಲಿ ಎಂದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿ, ಲೇಖಕಿ ಲತಾ ಸಂತೋಷ್ ಶೆಟ್ಟಿ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಭಜನಾ ಸಮಿತಿಯ ಸಂಚಾಲಕಿ, ಶಶಿಕಲಾ ಆನಂದ ಮಾಡ, ತುಳು ಕನ್ನಡ ವೆಲ್ಪೇರ್ ಅಸೋಷಿಯೇಶನ್ ಮಹಿಳಾ ವಿಭಾಗದ ಕಾರ್ಯಧ್ಯಕ್ಷರಾದ ವಸಂತಿ ಎಸ್ ಶೆಟ್ಟಿ, ಸಮಾಜ ಸೇವಕಿ ಸರೋಜಿನಿ ವಾಸುದೇವ ಪೂಜಾರಿ, ಕರ್ನಾಟಕ ಮಹಾಮಂಡಳ ಮೀರಾ-ಭಾಯಂಧರ್ ನ ಕಾರ್ಯಾಧ್ಯಕ್ಷರಾದ ಸುಮಂಗಳಾ ಅಶೋಕ್ ಕಣಂಜಾರ್, ಉಪಕಾರ್ಯಾಧ್ಯಕ್ಷರುಗಳಾದ ಶೀಲಾ ಎಂ. ಶೆಟ್ಟಿ ಮತ್ತು ಸಂಧ್ಯಾ ಶೆಟ್ಟಿ, ಸಂಚಾಲಕಿ ಆಶಾ ಆರ್ ಶೆಟ್ಟಿ, ಕಾರ್ಯದರ್ಶಿ ನಯನಾ ಅರ್ ಶೆಟ್ಟಿ, ಕೋಶಾಧಿಕಾರಿ ಅನುಷಾ ಶೆಟ್ಟಿ, ಜೊತೆ ಕಾರ್ಯದರ್ಶಿ ಹೇಮಾವತಿ ಹೆಗ್ಡೆ, ಜೊತೆ ಕೋಶಾಧಿಕಾರಿ ಯಶವಂತಿ ಶೆಟ್ಟಿ, ಭಜನಾ ಮಂಡಳಿಯ ಕಾರ್ಯಾಧ್ಯಕ್ಷರಾದ ಸುಮತಿ ಶೆಟ್ಟಿ, ಮಂಡಳದ ಗೌರವ ಅಧ್ಯಕ್ಷರಾದ ಡಾ. ಅರುಣೋದಯ ಎಸ್ ರೈ, ಅಧ್ಯಕ್ಷರಾದ ರವಿಕಾಂತ್ ಶೆಟ್ಟಿ ಇನ್ನ ಉಪಸ್ಥಿತರಿದ್ದರು. ಸುರೇಖಾ ಶೆಟ್ಟಿ, ಶಶಿಕಲಾ ಶೆಟ್ಟಿ, , ದಯಾ ಶೆಟ್ಟಿ ಇವರು ಪ್ರಾರ್ಥನೆ ಮಾಡಿದರು. ಅತಿಥಿಗಳನ್ನು ಸ್ವಾತಿ ಶೆಟ್ಟಿ, ಸೌಮ್ಯ ಶೆಟ್ಟಿ, ಆಶಾ ಎ. ಕೋಟ್ಯಾನ್, ಭವಾನಿ ಪೂಜಾರಿ ಪರಿಚಯಿಸಿದರು. ಕಾರ್ಯದರ್ಶಿ ನಯನಾ ಆರ್ ಶೆಟ್ಟಿ ಸ್ವಾಗತಿಸಿದರು. ನಗರ ಸೇವಕ ಗಣೇಶ್ ಶೆಟ್ಟಿಯವರು ಪ್ತ್ರೀತಿ ಭೋಜನವನ್ನು ಪ್ರಾಯೋಜಿಸಿದ್ದರು. ಚಂದ್ರಶೇಖರ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು.
ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್
Comments are closed.