ಕರಾವಳಿ

ನಳಿನ್ ಕುಮಾರ್ ಕಟೀಲ್ ಸಂಸದರ ನಿಧಿಯಿಂದ ಕರೋನಾ ಹೋರಾಟಕ್ಕೆ ರೂ. ಒಂದು ಕೋಟಿ ನೆರವು

Pinterest LinkedIn Tumblr

ಮಂಗಳೂರು: ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಸಂಸದರ ನಿಧಿಯಿಂದ ಕರೋನಾ ಹೋರಾಟಕ್ಕೆ ರೂ. ಒಂದು ಕೋಟಿ ನೆರವು ಘೋಷಣೆ ಮಾಡಿದ್ದಾರೆ

ಜಗತ್ತಿಗೆ ಬಂದಿರುವ ಮಹಾಮಾರಿ ಕೊರೋನಾ ರೋಗದ ವಿರುದ್ಧದ ಹೋರಾಟಕ್ಕೆ ಇಡೀ ರಾಜ್ಯವು ಸಜ್ಜಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಈ ಮಾರಕ ರೋಗದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಕೈಗೊಳ್ಳುವ ಕಾರ್ಯಗಳಿಗೆ ನಿಯಮಾನುಸಾರ ವಿನಿಯೋಗಿಸಲು ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ರೂ. 1.00 ಕೋಟಿ (ರೂಪಾಯಿ ಒಂದು ಕೋಟಿ ಮಾತ್ರ) ಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನೀಡಲು ಸಮ್ಮತಿಸಿರುತ್ತಾರೆ.

Comments are closed.