ಉಡುಪಿ: ಎನ್‌ಆರ್‌ಐ ಖ್ಯಾತ ಉದ್ಯಮಿ ಡಾ.ಬಿ.ಆರ್.ಶೆಟ್ಟಿ ಅವರ ಹಿರಿಯ ಸಹೋದರ ಕಾಪುವಿನ ಭವಗುತ್ತು ಸಚ್ಚಿದಾನಂದ ಶೆಟ್ಟಿ (82) ಮಾ. 28 ಶನಿವಾರ ಬೆಳಿಗ್ಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಸಚ್ಚಿದಾನಂದ ಶೆಟ್ಟಿ ವಿಮಾ ಕಂಪನಿ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದರು ಮತ್ತು ವ್ಯವಸ್ಥಾಪಕರಾಗಿ ನಿವೃತ್ತರಾದರು.
ಮಂಗಳೂರು ನಿವಾಸಿಯಾಗಿದ್ದ ಸಚ್ಚಿದಾನಂದ ಶೆಟ್ಟಿಯವರು ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದು ಕಳೆದ ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ತೆರಳಿದ್ದರು. ಮೃತರು ಅವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಪತ್ನಿ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಸಚ್ಚಿದಾನಂದ ಶೆಟ್ಟಿಯವರು ಸೋದರ ಡಾ ಬಿ. ಆರ್. ಶೆಟ್ಟಿ ಅವರ ವೃತ್ತಿ ಜೀವನದ ಉದ್ದಕ್ಕೂ ಮಾರ್ಗದರ್ಶನ ನೀಡುತ್ತಿದ್ದರು.
ಮೃತರ ಅಂತಿಮ ಸಂಸ್ಕಾರವನ್ನು ಭಾನುವಾರ ಬೆಳಿಗ್ಗೆ ಉಡುಪಿ ಜಿಲ್ಲೆಯ ಕಾಪುವಿನ ಭವಗುತ್ತುವಿನಲ್ಲಿ ನಡೆಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.
Comments are closed.