ಮಂಗಳೂರು, ಎಪ್ರಿಲ್.06: ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವಂತೆ ದೇಶಾದಾದ್ಯಂತ ಹೆಚ್ಚಿನ ಜನರು ದೀಪ ಹಚ್ಚಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಆದರೆ ಕೆಲವು ಕಿಡಿಗೇಡಿಗಳು ಈ ಬಗ್ಗೆ ಸುಳ್ಳು ಸುದ್ಧಿಗಳನ್ನು ಹರಡುತ್ತಿದ್ದು, ಜೊತೆಗೆ ಈ ಹಿಂದೆ ನಡೆದ ಘಟನೆಗಳ ಛಾಯಚಿತ್ರಗಳನ್ನು ಸಾಮಾಜಿಕ ಜಲತಾಣಗಳಲ್ಲಿ ಫೋಸ್ಟ್ ಮಾಡುವ ಮೂಲಕ ದೇಶ ದ್ರೋಹದ ಕೆಲಸದಲ್ಲಿ ತೊಡಗಿರುವುದು ವ್ಯಾಪಕ ಆಕ್ರೋಷಕ್ಕೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಕೊರೋನ ವೈರಸ್ ವಿರುದ್ಧ ರವಿವಾರ ರಾತ್ರಿ 9 ಗಂಟೆಗೆ ದೇಶದ ಬಹುತೇಕ ಜನತೆ ದೀಪ ಹಚ್ಚಿದ್ದಾರೆ. ಎಲ್ಲಾ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲೂ ಕೂಡ ಜನರು ಹಣತೆ, ಕ್ಯಾಂಡಲ್, ಟಾರ್ಚ್, ಮೊಬೈಲ್ ಲೈಟ್‌ಗಳನ್ನು ಬೆಳಗಿಸಿ ಕರೋನ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದಾರೆ. ರಾತ್ರಿ 9 ಗಂಟೆಗೆ ಸರಿಯಾಗಿ ಮನೆ, ಫ್ಲಾಟ್‌ಗಳಲ್ಲಿ ಲೈಟ್ ಆಫ್ ಮಾಡಿದ ಜನರು ಮನೆ ಮುಂದೆ, ಬಾಲ್ಕನಿ, ತಾರಸಿ ಮೇಲೆ ನಿಂತು 9 ನಿಮಿಷಗಳ ಕಾಲ ದೀಪ ಬೆಳಗಿಸಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳೂ ಪ್ರಧಾನಿ ಕರೆಗೆ ಸ್ಪಂದಿಸಿದ್ದಾರೆ. ಶಾಸಕರು, ಸಂಸದರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿದ್ದಾರೆ.
ಆದರೆ ದೇಶದಲ್ಲಿ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಉದ್ದೇಶ ಹೊಂದಿದ್ದ ಕೆಲವು ಕಿಡಿಗೇಡಿಗಳು (ದೇಶ ದ್ರೋಹಿಗಳು -ವಿಲಕ್ಷಣ ಮನಸ್ಸಿನವರು) ದೇಶದ ಒಳಿತಿಗಾಗಿ ಪ್ರಧಾನಿಯವರ ಕರೆಯಂತೆ ಜನರು ದೀಪ ಹಚ್ಚಿರುವ ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಪೋಸ್ಟ್ ಮಾಡುತ್ತಿರುವುದನ್ನು ಸರಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಪಿ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರೂಗಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.
ದೇಶ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ…… ದೇಶದ ಜನತೆಯ ಒಳಿತಿಗಾಗಿ ಸರ್ವಧರ್ಮದವರು ಒಟ್ಟಾಗಿ ಪ್ರಾರ್ಥಿಸಬೇಕಾದ ಈ ಸಂದರ್ಭದಲ್ಲಿ….. ದೇಶದ ಒಳಿತಿಗಾಗಿ ಎಲ್ಲರೂ ಜಾತಿ, ಧರ್ಮ, ಮತ,ಬೇದ ಮರೆತು ದೇಶದ ಜೊತೆ ಕೈಜೋಡಿಸಬೇಕಾದ ಈ ಸಂದರ್ಭದಲ್ಲಿ….. ದೇಶ ಆಳುವವರು ದೇಶದ ಜನರ ಹಿತ ರಕ್ಷಣೆಗಾಗಿ ಹಾಗೂ ದೇಶದ ಹಿತದೃಷ್ಠಿಯಿಂದ ಜನರಲ್ಲಿ ಆತ್ಮವಿಶ್ವಾಸ ತುಂಬಲು (ಕೆಲವೊಂದು ಕಠಿಣ ನಿರ್ಧಾರಗಳ ಮೂಲಕ) ಜಾರಿಗೆ ತರುತ್ತಿರುವ ಯೋಜನೆಗಳಿಗೆ ಪ್ರೋತ್ಸಾಹ ನೀಡಿ ದೇಶದ ಜೊತೆ ಕೈಜೋಡಿಸಬೇಕಾದ ಈ ಸಂದರ್ಭದಲ್ಲಿ……
ಒಟ್ಟಿನಲ್ಲಿ ಇಡೀ ವಿಶ್ವವೇ ಸಂಕಷ್ಟದಲ್ಲಿರುವ ಈ ನೋವಿನ ಸಂದರ್ಭದಲ್ಲಿ ಕೆಲವೇ ಕೆಲವು ವಿಲಕ್ಷಣ (ಮಾನಸಿಕ ಅಸ್ಥಿತ್ವ ಕಳೆದು ಕೊಂಡವರು) ಮನಸ್ಸಿನವರು ಮಾಡುತ್ತಿರುವ ಈ ಕೆಟ್ಟ ಅಪಪ್ರಚಾರದಿಂದ ದೇಶದ ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಅರಿವಿದೆಯೇ?
ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಾ… ಹಳೇ ಛಾಯಚಿತ್ರಗಳನ್ನು ಇಂದಿನ ಘಟನೆ ಜೊತೆ ಹೋಲಿಸುತ್ತಾ… ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹಗಳನ್ನು ಪೋಸ್ಟ್ ಮಾಡುವ ಮೂಲಕ ಜನರನ್ನು ಬೆದರಿಸುವ ಕೆಲಸದಲ್ಲಿ ತೊಡಗಿರುವ ಇಂತಹ ದೇಶ ದ್ರೋಹಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಉಗ್ರ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.
ವಿಶೇಷ ವರದಿ: ಸತೀಶ್ ಕಾಪಿಕಾಡ್
Comments are closed.