ಕರಾವಳಿ

ಉಡುಪಿ ಪುತ್ತಿಗೆ ಶ್ರೀಗಳಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

Pinterest LinkedIn Tumblr

ಉಡುಪಿ : ಲಾಕ್ ಡೌನ್ ಪರಿಣಾಮದಿಂದ ಸಂಕಷ್ಟದಲ್ಲಿರುವವರಿಗೆ ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಇಂದು ಸುಮಾರು 500ರಕ್ಕೂ ಅಧಿಕ ಕುಟುಂಬಗಳಿಗೆ ಹದಿನೈದು ದಿನಗಳಿಗೆ ಬೇಕಾಗುವ ಸುಮಾರು 5 ಲಕ್ಷ ರೂ. ಮೌಲ್ಯದ ಅತೀ ಮುಖ್ಯವಾದ ಆಹಾರ ಸಾಮಗ್ರಿಗಳ ಕಿಟ್ ನ್ನು ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಪುತ್ತಿಗೆ ಶ್ರೀಗಳು ನಮ್ಮ ರಾಜ್ಯ, ದೇಶ ಹಾಗೂ ಇಡೀ ಪ್ರಪಂಚವು ಕೊರೋನಾದಿಂದ ಮುಕ್ತಿಯಾಗಲಿ. ಎಲ್ಲಾ ದಾನಿಗಳು ಇಂತಹ ಸಂದರ್ಭದಲ್ಲಿ ಮುಂದೆ ಬಂದು ಅಗತ್ಯವಿದ್ದವರಿಗೆ ಸಹಕರಿಸಬೇಕು. ಉಡುಪಿ ಜಿಲ್ಲೆಯು ಮಾದರಿ ಜಿಲ್ಲೆಯಾಗಲಿ. ಎಲ್ಲರೂ ಪರಸ್ಪರ ಸಹಕರಿಸುವಂತಾಗಲಿ ಎಂದರು.

ಉಡುಪಿಯ ಶಾಸಕ ಶ್ರೀ ರಘುಪತಿ ಭಟ್, ಅವರು ಮಾತನಾಡುತ್ತಾ ಸರಕಾರಕ್ಕೆ ಮಾಡಲು ಸಾಕಷ್ಟೂ ಕೆಲಸವಿದ್ದು ಇಂತಹ ಮಠ ಮಂದಿರಗಳು ಮಾಡಿದಾಗ ಅದು ಪ್ರಸಾದದ ರೂಪದಲ್ಲಿ ಆಗುತ್ತದೆ. ಈ ಸಂದರ್ಭದಲ್ಲಿ ಇಡೀ ವಿಶ್ವವೇ ಆತಂಕದಲ್ಲಿದ್ದು ಇಂತಹ ಸಂದರ್ಭದಲ್ಲಿ ಈ ಸಾಮಾಗ್ರಿಗಳು ಬಂದಾಗ ಪ್ರಯೋಜನವಾಗುತ್ತಿದೆ. ಪುತ್ತಿಗೆ ಮಠ ವಿಶ್ವವ್ಯಾಪ್ತಿ ಯಾಗಿ ಬೆಳೆದ ಮಠ. ಸ್ವಾಮೀಜಿಯವರು ವಿಶ್ವಮಟ್ಟದ ಶಾಂತಿ ಸಮಿತಿಯ ಅಧ್ಯಕ್ಷರಾಗಿದ್ದು, ಇಂದಿನ ಈ ಸಹಾಯವು ಇದು ನಮಗೆ ಪ್ರೇರಣೆ ನೀಡಿದೆ ಎಂದರು.

ಉಡುಪಿ ಡಿಸಿ ಜಗದೀಶ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಹಾಗೂ ಬ್ರಹ್ಮಾವರ ತಹಶೀಲ್ದಾರ್ ಅವರು ವಸ್ತುಗಳನ್ನು ಪ್ರಸಾದ ಎಂದು ಸ್ವೀಕರಿಸಿದರು. ಮತ್ತು ಇದರಲ್ಲಿ ಯಾವುದೇ ವಸ್ತು ವ್ಯರ್ಥ ಮಾಡದೆ ಅತ್ಯಂತ ನಿರ್ಗತಿಕ ಕುಟುಂಬಗಳಿಗೆ ವಿತರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ, ಮ್ಯಾನೇಜರ್ ಶ್ರೀ ವಿಷ್ಣುಮೂರ್ತಿ ಉಪಾಧ್ಯಾಯ, ಶ್ರೀ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

ವರದಿ: ದಿನೇಶ್ ಕುಲಾಲ್, ಮುಂಬಾಯಿ.

Comments are closed.