ಕರಾವಳಿ

ಜಪ್ಪಿನಮೊಗರು : ಭಟ್ಟಿ ಸಾರಾಯಿ ಘಟಕಕ್ಕೆ ಅಬಕಾರಿ ಇಲಾಖೆ ದಾಳಿ- ಸಾರಾಯಿ ಸಹಿತಾ ಸೊತ್ತು ವಶ

Pinterest LinkedIn Tumblr

ಮಂಗಳೂರು ಏಪ್ರಿಲ್10 : ಅಬಕಾರಿ ಇಲಾಖೆ ಅಧಿಕಾರಿಗಳು, ಮಂಗಳೂರಿನ ಜಪ್ಪಿನಮೊಗರು ಗ್ರಾಮದ ನ್ಯೂ ಪಡ್ಪು ಎಂಬಲ್ಲಿ ರಿಚರ್ಡ್‍ಡಿಸೋಜಾ ಎಂಬವರ ಮನೆ ವಠಾರಕ್ಕೆ ದಾಳಿ ನಡೆಸಿ, ಅಕ್ರಮವಾಗಿ ಭಟ್ಟಿ ಸಾರಾಯಿ ತಯಾರಿಸುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ.

ಈ ಸಂದರ್ಭದಲ್ಲಿ ಮೂರುವರೆ ಲೀಟರ್ ಲೀಟರ್ ಭಟ್ಟಿ ಸಾರಾಯಿಮತ್ತು ಭಟ್ಟಿ ಸಾರಾಯಿ ತಯಾರಿಕಾ ಸಾಮಾಗ್ರಿಗಳನ್ನು ಜಫ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.

ದ.ಕ.ಜಿಲ್ಲಾಅಬಕಾರಿ ಡಿಸಿ ಶೈಲಜಾಕೋಟೆ, ಡಿವೈಎಸ್‍ಪಿ ಶಿವಪ್ರಸಾದ್‍ಅವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ವಲಯ 2ರ ಅಬಕಾರಿಇನ್ಸ್ಸ್‍ಪೆಕ್ಟರ್‍ರತ್ನಾಕರರೈಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿಉಪನಿರೀಕ್ಷಕ ಆಶಿಸ್, ಸಿಬ್ಬಂದಿಗಳಾದ ಬಸವರಾಜತೋರೆ, ನವೀನ್ ನಾಯ್ಕ್ ಮತ್ತುಚಾಲಕ ಹರಿಯಪ್ಪಇದ್ದರು.

Comments are closed.