ಮಂಗಳೂರು ; ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು. ಅರ್ಜಿಯನ್ನು ಮಾರ್ಚ್ 30 ರೊಳಗೆ ಸಲ್ಲಿಸುವಂತೆ ಅಕಾಡೆಮಿಯು ತಿಳಿಸಿರುತ್ತದೆ.
ಆದರೆ ರಾಜ್ಯದಾದ್ಯಂತ ಹರಡಿರುವ ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್ ಆಗಿರುವ ಕಾರಣ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಯೋಜನೆಯ ಅರ್ಜಿ ದಿನಾಂಕವನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಅತೀ ಶೀಘ್ರವಾಗಿ ತಿಳಿಸಲಾಗುವುದು .
ಮಹನೀಯರು, ಸಂಘಟಕರು, ಸಂಸ್ಥೆಗಳು, ಸಾಧಕ ಅಭಿಮಾನಿಗಳು, ಲೇಖಕರು, ಪ್ರಕಾಶಕರು ಸಹಕರಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ: 9901016962 ಸಂಪರ್ಕಿಸಬಹುದು ಎಂದು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್ ಇವರ ಪ್ರಕಟಣೆ ತಿಳಿಸಿದೆ.
Comments are closed.