ಕರಾವಳಿ

ಜ್ಷರ, ಕೆಮ್ಮು, ಗಂಟಲು ಕೆರೆತ,ಉಸಿರಾಟದ ತೊಂದರೆ ಇರುವವರಿಗೆ ಜಿಲ್ಲೆಯಾದ್ಯಂತ ಜ್ವರ ಚಿಕಿತ್ಸಾಲಯ ಆರಂಭ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು ಏಪ್ರಿಲ್. 10: ಜ್ಷರ, ಕೆಮ್ಮು, ಗಂಟಲು ಕೆರೆತ ಅಥವಾ ಉಸಿರಾಟದ ತೊಂದರೆಯಂತಹ ಕೊರೋನಾ ವೈರಸ್‍ರೋಗ ಲಕ್ಷಣಗಳನ್ನು ಹೊಂದಿರುವ ಯಾವುದೇ ಶಂಕಿತ ವ್ಯಕ್ತಿ ಮೊದಲು ತಪಾಸನೆಗಾಗಿ ದ.ಕ ಜಿಲ್ಲೆಯಾದ್ಯಂತ ಜ್ವರ ಚಿಕಿತ್ಸಾಲಯಗಳನ್ನು ಆರಂಭಿಸಲಾಗಿದೆ.

ಸಾರ್ವಜನಿಕರು ಈ ಕೇಂದ್ರಗಳಿಗೆ ಭೇಟಿ ನೀಡಿ, ತಮ್ಮ ವೈದ್ಯಕೀಯತಪಾಸಣೆ ನಡೆಸಬಹುದಾಗಿದೆ.

ದ.ಕಜಿಲ್ಲೆಯಲ್ಲಿರುವಜ್ವರ ಕ್ಲಿನಿಕ್‍ಗಳ ವಿವರಇಂತಿವೆ:
ಎ.ಜೆ ಮೆಡಿಕಲ್‍ಕಾಲೇಜು, ಕುಂಟಿಕಾನ,
ಫಾದರ್ ಮುಲ್ಲರ್‍ಆಸ್ಪತ್ರೆ, ಕಂಕನಾಡಿ,
ಕೆ.ಎಂ.ಸಿ. ಆಸ್ಪತ್ರೆಅತ್ತಾವರ, ಮಂಗಳೂರು,
ಯೆನೆಪೊಯ ಆಸ್ಪತ್ರೆ, ದೇರಳಕಟ್ಟೆ,
ಶ್ರೀನಿವಾಸ್ ಮೆಡಿಕಲ್‍ಕಾಲೇಜು, ಮುಕ್ಕ ಸುರತ್ಕಲ್,
ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ,
ಕೆ.ವಿ.ಜಿಆಸ್ಪತ್ರೆ, ಸುಳ್ಯ,
ಕಣಚೂರುಆಸ್ಪತ್ರೆ, ಮುಖ್ಯರಸ್ತೆ, ಮುಡಿಪು
ವೆನ್ಲಾಕ್‍ಆಸ್ಪತ್ರೆ, ಹಂಪನಕಟ್ಟೆ ಮಂಗಳೂರು,
ತಾಲೂಕು ಸರ್ಕಾರಿಆಸ್ಪತ್ರೆ, ಬೆಳ್ತಂಗಡಿ, ಸರ್ಕಾರಿಆಸ್ಪತ್ರೆ, ಪುತ್ತೂರು, ತಾಲೂಕುಆಸ್ಪತ್ರೆ ಬಂಟ್ವಾಳ, ಸಮುದಾಯಆಸ್ಪತ್ರೆ, ಸುಳ್ಯ.

ಕ್ವಾರೇಂಟೈನ್ ಮೇಲ್ವಿಚಾರಣೆ ಕೇಂದ್ರಗಳ ವಿವರಇಂತಿವೆ:ಯಾವುದೇರೋಗ ಲಕ್ಷಣಇಲ್ಲದಿದ್ದರೂ, ಕೋವಿಡ್ 19 ಸಂಪರ್ಕ ಸಾಧ್ಯತೆಇರುವವರನ್ನು ನಿಗಾವಣೆಯಲ್ಲಿಡಲುಕ್ವಾರೆಂಟೈನ್ ಮೇಲ್ವಿಚಾರಣಾ ಕೇಂದ್ರಗಳನ್ನು ತೆರೆಯಲಾಗಿದೆ.ಇ.ಎಸ್.ಐಆಸ್ಪತ್ರೆ, ಮಂಗಳೂರು, ಇಂಡಿಯಾನಆಸ್ಪತ್ರೆ, ಪಂಪುವೆಲ್, ಎನ್.ಐ.ಟಿ.ಕೆ ಹಾಸ್ಟೆಲ್ ಸುರತ್ಕಲ್, ಯೆನೆಪೊಯ ಹಾಸ್ಟೆಲ್ ದೇರಳಕಟ್ಟೆ.

ಪ್ರತ್ಯೇಕ ಮೇಲ್ವಿಚಾರಣೆ ಕೇಂದ್ರಗಳು : ಶಂಕಿತಕರೋನಾ ರೋಗಿಗಳನ್ನು ಪ್ರತ್ಯೇಕವಾಗಿಡಲುಜಿಲ್ಲೆಯ 13 ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾವಣೆ ಕೇಂದ್ರಗಳನ್ನುತೆರೆಯಲಾಗಿದೆ.

ಎ.ಜೆ ಮೆಡಿಕಲ್‍ಕಾಲೇಜು, ಆಸ್ಪತ್ರೆ, ಮಂಗಳೂರು, ಫಾದರ್ ಮುಲ್ಲರ್‍ಆಸ್ಪತ್ರೆ, ಕಂಕನಾಡಿ,
ಕೆ.ಎಂ.ಸಿ. ಆಸ್ಪತ್ರೆಅತ್ತಾವರ, ಯೆನೆಪೋಯಆಸ್ಪತ್ರೆ, ದೇರಳಕಟ್ಟೆ, ಶ್ರೀನಿವಾಸ್ ಮೆಡಿಕಲ್‍ಕಾಲೇಜುಆಸ್ಪತ್ರೆ, ಮುಕ್ಕ, ಸುರತ್ಕಲ್, ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ, ಕೆ.ವಿ.ಜಿಆಸ್ಪತ್ರೆ, ಸುಳ್ಯ, ಕಣಚೂರುಆಸ್ಪತ್ರೆ, ವೆನ್ಲಾಕ್‍ಆಸ್ಪತ್ರೆ, ,ತಾಲೂಕುಸರ್ಕಾರಿಆಸ್ಪತ್ರೆ, ಬೆಳ್ತಂಗಡಿ, ಸರ್ಕಾರಿಆಸ್ಪತ್ರೆ, ಪುತ್ತೂರು, ತಾಲೂಕುಆಸ್ಪತ್ರೆ ಬಂಟ್ವಾಳ, ಸಮುದಾಯಆಸ್ಪತ್ರೆ, ಆಸ್ಪತ್ರೆ ಸುಳ್ಯ.
ಜಿಲ್ಲಾವೆನ್ಲಾಕ್‍ಆಸ್ಪತ್ರೆಯುಕೋವಿಢ್‍ದೃಢಪಟ್ಟು, ತುರ್ತುಚಿಕಿತ್ಸೆ ಹಾಗೂ ಗಂಭೀರಾವಸ್ಥೆಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಿದೆ.
ರಾಜ್ಯಕೋವಿಡ್ 19 ತುರ್ತುಕ್ರಿಯಾಯೋಜನೆಯಂತೆ ಈ ಎಲ್ಲಾ ಸೌಲಭ್ಯಗಳ ಬಗ್ಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‍ಅಧಿಸೂಚನೆ ಹೊರಡಿಸಿದ್ದಾರೆ.

Comments are closed.