ಕರಾವಳಿ

ರಾಜ್ಯ ಬಿಜೆಪಿಯಿಂದ ಸಹಾಯವಾಣಿ ಆರಂಭ: ಇಡೀ ರಾಜ್ಯಕ್ಕೆ ಒಂದೇ ದೂರವಾಣಿ ಸಂಖ್ಯೆ

Pinterest LinkedIn Tumblr

ಮಂಗಳೂರು, ಎಪ್ರಿಲ್.10; ರಾಜ್ಯ ಬಿಜೆಪಿ ಸಹಾಯವಾಣಿಗೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್‌ ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಂದಿನಿಂದ ರಾಜ್ಯ ಬಿಜೆಪಿ ಸಹಾಯವಾಣಿಯು ಒಂದೇ ಕಡೆಯಲ್ಲಿ ಕೇಂದ್ರ ಬಿಂದುವಾಗಿ ಆರಂಭವಾಗಲಿದೆ. ಈ ಸಹಾಯವಾಣಿ ಇಡೀ ರಾಜ್ಯಕ್ಕೆ ಒಂದೇ ದೂರವಾಣಿ ಸಂಖ್ಯೆಯಿಂದ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಮಾ.23ರಿಂದಲೇ ರಾಜ್ಯದ ಎಲ್ಲಾ ಜಿಲ್ಲೆ, ಮಂಡಲಗಳಲ್ಲಿ ಬಿಜೆಪಿ ವಾರ್ ರೂಂ ಆರಂಭವಾಗಿದೆ. ಇಂದಿನಿಂದ ಬಿಜೆಪಿ ಕರ್ನಾಟಕ ಕೋವಿಡ್ ಹೆಲ್ಪ್ ಲೈನ್ ಆರಂಭವಾಗಲಿದೆ . ರಾಜ್ಯದ ಎಲ್ಲಾ ಜನರು ನೆರವಿಗಾಗಿ 08068324040 ಈ ಸಂಖ್ಯೆ ಮೂಲಕ ಸಂಪರ್ಕ ಮಾಡಬಹುದು. 8722557733 ಈ ನಂಬರ್ ಮೂಲಕ ವಾಟ್ಸಾಪ್ ಸಂಪರ್ಕ ಮಾಡಬಹುದು ಎಂದು ತಿಳಿಸಿದರು.

ಜೊತೆಗೆ BJPKARSMIDCELL ಫೇಸ್ ಬುಕ್ ಮೂಲಕವೂ ಹಾಗೂ ಟ್ವಿಟರ್ ಮೂಲಕವೂ ಸಂಪರ್ಕಿಸಬಹುದು. ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ಕರೆದುಹೋಗಲು ವ್ಯವಸ್ಥೆ, ಮೆಡಿಕಲ್, ಆಹಾರ ಸಾಮಾಗ್ರಿಗಳಿಗೆ ವ್ಯವಸ್ಥೆ, ತುರ್ತುಪರಿಸ್ಥಿತಿ ಹೀಗೆ 12 ವಿಷಯಗಳಿಗೆ ಯಾವುದೇ ಕರೆಗಳು ಬಂದಲ್ಲಿ ಎಲ್ಲಿಂದ ಕರೆ ಬಂದಿದೆಯೋ ಅಲ್ಲಿನ ಮಂಡಲ, ವಿಭಾಗಗಳಿಗೆ ತಿಳಿಸಲಾಗುವುದು. ತಕ್ಷಣ ಅಲ್ಲಿನ ಕಾರ್ಯಕರ್ತರು, ಕರೆ ಬಂದವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿ ಕೊಡುತ್ತಾರೆ.

ಅಲ್ಲದೆ ಆ ಬಗ್ಗೆ ಫೋಟೋ ತೆಗೆದು ಅಪ್ಡೇಟ್ ಮಾಡಲಾಗುತ್ತದೆ. ಇದರಿಂದ ಯಾವ ದೂರು ಪೂರೈಸಿದೆ ಎಂಬುದರ ಬಗ್ಗೆ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ ಎಂದರು.

ನಾವು ಈಗಾಗಲೇ ಕೆಲಸ ಆರಂಭಿಸಿದ್ದೇವೆ. ನಮ್ಮ ಹೆಲ್ಪ್ ಲೈನ್ ಆರಂಭ ತಡವಾಗಿಲ್ಲ. ಆದರೆ ಹೆಲ್ಪ್ ಲೈನ್ ಸಂಖ್ಯೆ ಇಂದಿನಿಂದ ಆರಂಭವಾಗಲಿದೆ. ಆಹಾರ, ತುರ್ತು ಚಿಕಿತ್ಸೆ ಸೇರಿ ಯಾವುದೇ ಅವಶ್ಯಕತೆಗೆ ಕರೆ ಮಾಡಬಹುದು. ಇದರಲ್ಲಿ 12 ಅಗತ್ಯ ವಿಷಯಗಳನ್ನು ಜೋಡಿಸಲಾಗಿದೆ ಎಂದರು.

ದ.ಕ ಜಿಲ್ಲೆಯ 2.16 ಲಕ್ಷ ಜನ್ ಧನ್ ಖಾತೆಗಳಿಗೆ 10.79 ಕೋಟಿ ನೀಡಿದ್ದೇವೆ. ಇಎಮ್‌ಐ ಮುಂದೂಡಿಕೆ ಕುರಿತಾಗಿ ಬ್ಯಾಂಕ್‌ನಿಂದ ನೋಟೀಸ್ ಬಂದರೆ ಯಾವುದೇ ಭಯ ಬೇಡ. ನಮ್ಮಲ್ಲಿ ಸಾಧ್ಯವಾದರೆ ಮಾತ್ರ ಕಟ್ಟಿ. ಇಲ್ಲವಾದ್ದಲ್ಲಿ ಸಮಸ್ಯೆಯಿಲ್ಲ. ಈ ಕುರಿತಾಗಿ ನಾವು ಈಗಾಗಲೇ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದೇವೆ. ವಿದ್ಯುತ್ ಬಿಲ್ ಬಂದರೂ ಅಸಮರ್ಥರಿದ್ದರೆ ಕಟ್ಟುವ ಅಗತ್ಯ ಇಲ್ಲ. ಮೂರು ತಿಂಗಳು ವಿದ್ಯುತ್‌ ಬಿಲ್‌ ಕಟ್ಟದಿದ್ದಲ್ಲಿ ವಿದ್ಯುತ್‌ ಕಡಿತಗೊಳಿಸುವುದಿಲ್ಲ ಎಂದು ಹೇಳಿದರು.

Comments are closed.