ಕರಾವಳಿ

ದ.ಕ.ಜಿಲ್ಲಾ ಕ್ಯಾಟರಿಂಗ್ ಮಾಲ್ಹಕರ ಸಂಘದ ಸೇವಾಕಾರ್ಯದ ಬಗ್ಗೆ ಸಚಿವ ಪೂಜಾರಿ ಮೆಚ್ಚುಗೆ

Pinterest LinkedIn Tumblr

ಮಂಗಳೂರು, ಎಪ್ರಿಲ್.10 : ಕೊರೋನಾ ವೈರಸ್‍ರೋಗದಿಂದಾಗಿ ಇಡೀ ದೇಶ ಸಂಕಷ್ಟದಲ್ಲಿರುವ ಇಂತಹ ಸಂದರ್ಭದಲ್ಲಿ ಯಾವೂದೇ ರೀತಿಯ ಉದ್ಯಮವಿಲ್ಲದೇ ತಮ್ಮ ಆದಾಯವನ್ನೆ ಕಳೆದು ಕೊಂಡಿರುವ ಇಂತಹ ಕ್ಲಿಷ್ಟ ಪರಿಸ್ಥಿಯಲ್ಲೂ ಬಡವರ ಮೇಲಿನ ಕಾಳಾಜಿಯಿಂದ ಅಹಾರ ವಸ್ತು ಪದಾರ್ಥಗಳ ಕಿಟ್ ವಿತರಿಸುತ್ತಿರುವ ದ.ಕ.ಜಿಲ್ಲಾ ಕ್ಯಾಟರಿಂಗ್ ಮಾಲ್ಹಕರ ಸಂಘದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ದ.ಕ.ಜಿಲ್ಲಾ ಕ್ಯಾಟರಿಂಗ್ ಮಾಲ್ಹಕರ ಸಂಘದ ವತಿಯಿಂದ ಶುಕ್ರವಾರ ನಗರದ ಕದ್ರಿ ದೇವಸ್ಥಾನದ ಸಮೀಪದ ಗೋಕುಲ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಕ್ಯಾಟರಿಂಗ್ ಸಂಸ್ಥೆಯಲ್ಲಿ ದುಡಿಯುತ್ತಿರುವ ಬಡ ಕಾರ್ಮಿಕರಿಗೆ ಅಹಾರ ವಸ್ತು ಪದಾರ್ಥಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಕಿಟ್ ವಿತರಿಸಿ ಮಾತನಾಡಿದರು.

ವಿಶ್ವಕ್ಕೆ ಮಾರಿಯಾದ ಕೊರೊನಾ ವೈರಸ್ ವಿರುದ್ದ ಎಲ್ಲರೂ ಒಗ್ಗಟ್ಟಾಗಿ ಹೋರಾಡ ಬೇಕಿದೆ. ಕೊರೊನಾ ರೋಗವನ್ನು ತೊಡೆದು ಹಾಕಲು ಸರಕಾರವು ಬಹಳ ಹರಸಾಹಸ ಪಡುತ್ತಿದೆ. ಸರಕಾರ ಹಾಗೂ ಸಮಾಜ ಒಂದಾಗಿ ಸೇರಿಕೊಂಡು ಮಾರಕ ರೋಗ ಕೊರೊನಾದ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡಾ ಹೆಚ್ಚು ಜಾಗೃತರಾಗ ಬೇಕಾಗಿದೆ. ಸರಕಾರ ತಿಳಿಸಿದಂತೆ ಮನೆಯಲ್ಲೇ ಇದ್ದು ಕಠಿಣ ಪರಿಸ್ಥಿತಿಯನ್ನು ಎದುರಿಸ ಬೇಕಾಗಿದೆ ಎಂದು ಸಚಿವರು ತಿಳಿಸಿದರು.

ದ.ಕ ಜಿಲ್ಲೆಯ ಗಡಿ ಪ್ರದೇಶ ಯಾವ ರೀತಿಯಲ್ಲಿ ಇದೆ ಎಂದರೆ ಪಕ್ಕದಲ್ಲಿರುವ ಕಾಸರಗೊಡ್ ನಲ್ಲಿ ದಿನಕ್ಕೆ 34 ಪೊಸಿಟಿವ್ ಪ್ರಕರಣ ದಾಖಲಾಗುತ್ತಿದೆ. ಹಾಗಾಗಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳದಿದ್ದರೆ ಇತರೆಡೆಗಳಲ್ಲಿ ಇರುವ ಎಲ್ಲವೂ ಕೂಡ ನಮ್ಮಲ್ಲಿ ಪಸರಿಸ ಬಹುದು ಎಂಬ ಭಾವನೆಗಳಿವೆ. ಜನರ ಮನಸಿನಲ್ಲಿ ಇಷ್ಟೆಲ್ಲ ಬಿಗು, ನಿರ್ಬಂಧ ಬೇಕೆ ಎಂದು ಅನಿಸಬಹುದು, ಅದರೆ ಮನುಷ್ಯ ಬದುಕ ಬೇಕಾದರೆ ಕೆಲವೊಂದು ಕಠಿಣ ನಿಯಮಗಳನ್ನು ಕೈಗೊಳ್ಳ ಬೇಕಾದದ್ದು ಅನಿವಾರ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ನಮ್ಮ ಇಲಾಖ ಅಧಿಕಾರಿಗಳು ಎಲ್ಲರು ತಂಡವಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸರಕಾರದೊಂದಿಗೆ ಕೈ ಜೋಡಿಸುವ ಮೂಲಕ ಕೊರೊನಾ ರೋಗವನ್ನು ತೊಡೆದು ಹಾಕಲು ಸಹಕರಿಸಬೇಕು ಎಂದು ಸಚಿವರು ಹೇಳಿದರು.

ಎಲ್ಲರೂ ಕೊರೊನಾ ವೈರಸ್ ನಿಂದ ತೊಂದರೆಗೊಳಗಾಗಿದ್ದಾರೆ. ಉದ್ಯೋಗ ಇಲ್ಲದೆ ಮನೆಯಲ್ಲೇ ಉಳಿದು ಸಂಕಷ್ಟಗೊಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ದ.ಕ.ಜಿಲ್ಲೆಯ ಕ್ಯಾಟರಿಂಗ್ ಮಾಲಕರ ಸಂಸ್ಥೆಯು ಬಡ ಕೂಲಿ ಕಾರ್ಮಿಕರ ಹೊಟ್ಟೆ ತುಂಬಿಸುವ ಕೆಲಸ ಮಾಡುವ ಮೂಲಕ ಸರಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಸಚಿವ ಕೋಟಾ ಹೇಳಿದರು.

ಕಾರ್ಯಕ್ರಮದಲ್ಲಿ ಅಥಿತಿಯಾಗಿ ಪಾಲ್ಗೊಂಡಿದ್ದ ಮಂಗಳೂರು ಉತ್ತರ (ಸುರತ್ಕಲ್) ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಅವರು ಮಾತನಾಡಿ, ಪ್ರತಿಯೊಂದು ಸಂಘಸಂಸ್ಥೆಗಳು ಮುಂದೆ ಬಂದು ಈ ರೀತಿಯಲ್ಲಿ ಬಡ ಜನರಿಗೆ ನೆರವು ನೀಡಿದರೆ ಜಿಲ್ಲೆಯ ಬಡ ಜನತೆಗೆ ಸಹಾಯವಾಗುತ್ತದೆ.

ತಾನು ಈಗಾಗಲೇ ಉತ್ತರ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ಭಾಗದ ಜನರಿಗೆ ಅಹಾರ ವಸ್ತುಗಳ ಕಿಟ್ ಗಳನ್ನು ನೀಡಿದ್ದು, ಮುಂದಿನ ದಿನದಲ್ಲಿ ಕ್ಯಾಟರಿಂಗ್ ಮಾಲ್ಹಕರ ಸಂಘದ ಮೂಲಕವೂ ಕಿಟ್ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ್ ಮಾತನಾಡಿ, ಕೊರೊನಾ ವೈರಸ್ ಕಾರಣದಿಂದಾಗಿ ಕ್ಯಾಟರಿಂಗ್ ಉದ್ಯಮ ಸ್ಥಗಿತಗೊಂಡಿದ್ದು, ಕಳೆದ ಕೆಲವು ದಿನಗಳಿಂದ ಕ್ಯಾಟರಿಂಗ್ ಮಾಲ್ಹಕರಿಗೆ ಯಾವೂದೇ ಆದಾಯವಿಲ್ಲದೇ ಇರುವುದರಿಂದ ಅವರ ತೆರಿಗೆ ವಿನಾಯಿತಿ ಬಗ್ಗೆ ಮನಪಾ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಾಲಾಗುವುದು ಎಂದು ಹೇಳಿದರು.

ಯಾವೂದೇ ಸಂಘ ಸಂಸ್ಥೆಗಳು ನೀಡುವ ಆಹಾರ ಪದಾರ್ಥಗಳನ್ನು ನಿಜವಾದ ಫಲನುಭವಿಗಳು ಮಾತ್ರ ಪಡೆದುಕೊಂಡರೆ ಅದು ಅರ್ಥಪೂರ್ಣವಾಗುತ್ತದೆ. ಉಳ್ಳವರು ಮತ್ತೆ ಮತ್ತೆ ಪಡೆದುಕೊಂಡು ದಾಸ್ತಾನು ಇಡುವುದು ಕಾನೂನು ಪ್ರಕಾರ ತಪ್ಪು. ಮಾತ್ರವಲ್ಲದೇ ಸಂಕಷ್ಟದಲ್ಲಿರುವ ಬಡವರು ಇಂತಹ ಅಹಾರ ವಸ್ತುಗಳನ್ನು ಪಡೆದುಕೊಂಡರೆ ಮಾತ್ರ ಅದು ಅವರಿಗೆ ಅಮೃತವಾಗುತ್ತದೆ. ಮನೆಯಲ್ಲಿ ಆಹಾರ ಪದಾರ್ಥಗಳು ದಾಸ್ತಾನು ಇದ್ದು ಮತ್ತೆ ಮತ್ತೆ ಪಡೆದುಕೊಳ್ಳುವವರಿಗೆ ಅದು ವಿಷವಾಗುತ್ತದೆ ಎಂದು ಮನಪಾ ಅಯುಕ್ತ ಶಾನಾಡಿ ಅಜಿತ್ ಕುಮಾರ್ ಅಭಿಪ್ರಾಯಪಟ್ಟರು.

ತೆರಿಗೆ ವಿನಾಯಿತಿ ಮಾಡುವಂತೆ ಸಚಿವರಲ್ಲಿ ಮನವಿ:

ಕಾರ್ಯಕ್ರಮದಲ್ಲಿ ಕ್ಯಾಟರಿಂಗ್ ಮಾಲಕರ ಸಂಘದ ಕೆಲವೊಂದು ಸಮಸ್ಯೆಗಳನ್ನು ಸಚಿವರ ಮುಂದಿಟ್ಟ ಸಂಘದ ಸಂಘಟನಾ ಕಾರ್ಯದರ್ಶಿ ರಾಜ್ ಗೋಪಾಲ್ ರೈ ಅವರು ಕೊರೋನಾ ವೈರಸ್‍ರೋಗದಿಂದಾಗಿ ಈಗಾಗಲೇ ಉದ್ಯಮವಿಲ್ಲದೇ ಆದಾಯ ಕೂಡ ಇಲ್ಲದೇ ಇರುವುದರಿಂದ ತಮ್ಮ ತೆರಿಗೆಯನ್ನು ವಿನಾಯಿತಿ ಅಥಾವ ತೆರಿಗೆ ಕಡಿತ ಮಾಡಬೇಕು ಎಂದು ಸಚಿವರಲ್ಲಿ ಭಿನ್ನವಿಸಿಕೊಂಡರು. ಈ ಬಗ್ಗೆ ಪರಿಶೀಲನೆ ಮಾಡುವ ಭರವಸೆಯನ್ನು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ನೀಡಿದರು.

ಕಾರ್ಯಕ್ರಮದಲ್ಲಿ ಮನಪಾ ಸದಸ್ಯರಾದ ಮನೋಹರ್ ಶೆಟ್ಟಿ, ಶಕೀಲ ಕಾವಾ, ಶ್ರೀಕ್ಷೇತ್ರ ಕದ್ರಿಯ ಮೊಕ್ತೇಸರ ದಿನೇಶ್ ದೇವಾಡಿಗ ಅಥಿತಿಗಳಾಗಿ ಭಾಗವಹಿಸಿದ್ದರು. ದ.ಕ.ಜಿಲ್ಲಾ ಕ್ಯಾಟರಿಂಗ್ ಮಾಲ್ಹಕರ ಸಂಘದ ಅಧ್ಯಕ್ಷ ಸತೀಶ್ ಬೋಳಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಸ್ಥಾಪಕ ಸಲಹೆಗಾರರಾದ ಎಸ್.ಆರ್.ಕ್ಯಾಟರ್ಸ್ ಮಾಲ್ಹಕ ವಿಜಯ್ ಕುಮಾರ್ ಎಸ್.ಆರ್, ಅಂಚನ್ ಕ್ಯಾಟರ್ಸ್ ಮಾಲ್ಹಕ ಪ್ರಸಾದ್ ಅಂಚನ್, ಶ್ರೀದೇವಿ ಕ್ಯಾಟರ್ಸ್ ಮಾಲ್ಹಕ ಬಾಲಕೃಷ್ಣ ಕುಕ್ಯಾನ್, ಐಡಿಯಲ್ ಕ್ಯಾಟರ್ಸ್ ಮಾಲ್ಹಕ ಯಶವಂತ್ ಪಚ್ಚನಾಡಿ, ಸಂಘದ ಗೌರವ ಅಧ್ಯಕ್ಷರಾದ ಕಾಮಾತ್ ಕ್ಯಾಟರಿಂಗ್ ಮಾಲಕ ಸುಧಾಕರ್ ಕಾಮಾತ್, ಎಮ್ ಎ ಎಸ್ ಕ್ಯಾಟರಿಂಗ್ ಮಾಲ್ಹಕ ಇಕ್ಬಾಲ್, ಫ್ಯಾಮಿಲ್ ಕ್ಯಾಟರಿಂಗ್ ಮಾಲ್ಹಕ ವಿವೇನ್ ಲಸ್ರದೋ, ಸಂಘದ ಉಪಾಧ್ಯಕ್ಷ ಕೋಮಲ್ಸ್ ಕ್ಯಾಟರ್ಸ್ ಮಾಲಕ ವಿದ್ಯಾಧರ್ ನಾಗ್ವೇಕರ್, ಗೋಕುಲ್ ಕ್ಯಾಟರ್ಸ್ ಮಾಲಕ ಗೋಕುಲ್ ಕದ್ರಿ, ಭವನಿ ಕ್ಯಾಟರ್ಸ್ ಮಾಲ್ಹಕ ವಿಶ್ವನಾಥ್, ಆರ್.ಕೆ ಫುಡ್ ಮಾಲ್ಹಕ ಕರ್ಣ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಘದ ಸಂಘಟನಾ ಕಾರ್ಯದರ್ಶಿ ಭಗವ ಕ್ಯಾಟರ್‍ಸ್ ಮಾಲ್ಹಕ ರಾಜ್ ಗೋಪಾಲ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನೈಸ್ ಕ್ಯಾಟರ್ಸ್ ಮಾಲ್ಹಕ ದೀಪಕ್ ಕೋಟ್ಯಾನ್ ವಂದಿಸಿದರು.

ಸಾಂಕೇತಿಕ ವಿತರಣೆ ;

ಪ್ರಾರಂಭದ ಹಂತದಲ್ಲಿ ದ.ಕ.ಜಿಲ್ಲೆಯ ಸುಮಾರು 600 ಮಂದಿ ಕ್ಯಾಟರಿಂಗ್ ಸಂಸ್ಥೆಯಲ್ಲಿ ದುಡಿಯುತ್ತಿರುವ ತೀರಾ ಬಡ ಕಾರ್ಮಿಕರಿಗೆ ಅಹಾರ ವಸ್ತು, ದಿನಸಿ ಸಾಮಾಗ್ರಿಗಳನ್ನು ವಿತರಿಸುವ ಯೋಜನೆ ಮಾಡಲಾಗಿದ್ದು, ಇಂದಿನ ಕಾರ್ಯಕ್ರಮದಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕಾಗಿ ರುವುದರಿಂದ ಸಾಂಕೇತಿಕವಾಗಿ ಸುಮಾರು 25 ಮಂದಿಗೆ ಮಾತ್ರ ವಿತರಿಸಲಾಯಿತು. ಉಳಿದವರಿಗೆ ಸಂಘಟಕರೇ ಮನೆ ಬಾಗಿಲಿಗೆ ತೆರಳಿ ಅಹಾರ ವಸ್ತು, ದಿನಸಿ ಸಾಮಾಗ್ರಿಗಳನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಿದರು.

ವರದಿ / ಚಿತ್ರ : ಸತೀಶ್ ಕಾಪಿಕಾಡ್ /Mob:9035089084

Comments are closed.