ಕರಾವಳಿ

ಮಂಗಳೂರು ನಗರದಲ್ಲಿ sealdown ಇಲ್ಲ- ವದಂತಿಗಳಿಗೆ ಕಿವಿಕೊಡಬೇಡಿ

Pinterest LinkedIn Tumblr

ಮಂಗಳೂರು, ಎಪ್ರಿಲ್.11 : ಮಂಗಳೂರು ನಗರದಲ್ಲಿ sealdown ಆಗಿದೆ ಎಂಬ ಸುದ್ದಿ ಕೆಲವೊಂದು ಟಿವಿ ಚಾನೆಲ್ ಗಳಲ್ಲಿ ಬರುತ್ತಿದೆ. ಇದೊಂದು ನಿರಾಧಾರ ಸುದ್ದಿ ಆಗಿದೆ. ಮಂಗಳೂರು ನಗರದಲ್ಲಿ ಯಾವುದೇ sealdown ಪ್ರಕ್ರಿಯೆ ನಡೆಯುತ್ತಿಲ್ಲ. ಈಗಾಗಲೇ ಕಳೆದ ಕೆಲವು ದಿನಗಳಿಂದ ಲಾಕ್ ಡೌನ್ ಪ್ರಕ್ರಿಯೆ‌ ಜಾರಿಯಲ್ಲಿದೆ. ಇದನ್ನೇ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.

ಇಂತಹ ಯಾವುದೇ ಸುದ್ದಿಯನ್ನು ಪ್ರಸಾರ ಮಾಡುವ ಮೊದಲು ಸಂಬಂಧಪಟ್ಟವರಿಂದ ದೃಢೀಕರಿಸಲು ಕೋರಲಾಗಿದೆ. ವದಂತಿ, ಅಧಾರ ರಹಿತ ಸುದ್ದಿಗಳ ಪ್ರಸಾರದಿಂದ ಸಾರ್ವಜನಿಕರಲ್ಲಿ ಆತಂಕ, ಗೊಂದಲ ಮೂಡುತ್ತಿದೆ ಎಂದು ವಾರ್ತಾ ಮತ್ತು ಪ್ರಸಾರ ಇಲಾಖೆ ಸ್ಪಷ್ಟಪಡಿದೆ.

Comments are closed.