ಮಂಗಳೂರು, ಎಪ್ರಿಲ್.16; ನಗರದ ತೊಕ್ಕೊಟ್ಟು ಸಮೀಪದ ನೇತ್ರಾವತಿ ಸೇತುವೆ ಮೇಲೆ ಕಾರೊಂದು ಪತ್ತೆಯಾಗಿದೆ., ಕಾರಿನ ಮಾಲಕ ನಾಪತ್ತೆಯಾಗಿದ್ದು, ನದಿಗೆ ಹಾರಿ ಆತ್ಮಹತ್ಯೆ ಮಾಡಿರಬೇಕೆಂದು ಶಂಕೀಸಲಾಗಿದೆ.
ಎಪ್ರಿಲ್15 ರ ಬುಧವಾರ ರಾತ್ರಿ ನೇತ್ರಾವತಿ ಸೇತುವೆ ಬಳಿ ಹೆಡ್ ಲೈಟ್ ಉರಿಸಿ ಬಾಗಿಲು ತೆರೆದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದೆ. ಕಾರಿನ ಮಾಲಕರ ಗುರುತನ್ನು ಪತ್ತೆ ಹಚ್ಚಿದ್ದು ಸೋಮೇಶ್ವರ ಕೊಲ್ಯ ನಿವಾಸಿ ವಿಕ್ರಂ ಗಟ್ಟಿ ಎಂದು ಗುರುತಿಸಲಾಗಿದೆ. ಕಾರಿನ ಮಾಲಕ ವಿಕ್ರಂ ಗಟ್ಟಿ ನಾಪತ್ತೆಯಾಗಿದ್ದು ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿದುಬಂದಿದೆ.
ಈ ನಡುವೆ ವಿಕ್ರಂ ನಾಪತ್ತೆಯಾಗಿರುವ ಕುರಿತು, ವಿಕ್ರಂ ಅವರ ಸಹೋದರ ಜೀವನ್ ಗಟ್ಟಿ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಸೋಮೇಶ್ವರ ಕೊಲ್ಯದವರಾಗಿರುವ ವಿಕ್ರಂ ಐದು ವರ್ಷಗಳ ಹಿಂದೆ ಕೈರಂಗಳದ ಪ್ರತಿಕ್ಷಾ ಅವರನ್ನು ವಿವಾಹವಾಗಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ಕೊಣಾಜೆಯ ಪುಳಿಂಚಾಡಿ ಬಳಿ ಪತ್ನಿ ಪ್ರತಿಕ್ಷಾ ಅವರ ಪಿತ್ರಾರ್ಜಿತ ಆಸ್ತಿ ದೊರೆತ ಹಿನ್ನಲೆಯಲ್ಲಿ ಅಲ್ಲೇ ಮನೆ ನಿರ್ಮಿಸಿ ಕುಟುಂಬ ಸಮೇತ ವಾಸವಾಗಿದ್ದರು. ಈ ದಂಪತಿ ನಾಲ್ಕು ವರ್ಷದ ಪುತ್ರನಿದ್ದಾನೆ.
ಎ.15ರಂದು ರಾತ್ರಿ ಮನೆಮಂದಿ ಟಿ.ವಿ. ವೀಕ್ಷಿಸುತ್ತಿದ್ದ ವೇಳೆ ವಿಕ್ರಮ್ ಕಾರಿನ ಬ್ಯಾಟರಿ ರೀಚಾರ್ಜ್ ಮಾಡಲು ಕೊಣಾಜೆ ಪದವು ತನಕ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದು ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಬರುತ್ತಿದ್ದು, ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಕೊಣಾಜೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.ಸ್ಥಳಕ್ಕೆ ಕಂಕನಾಡಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ
Comments are closed.