ಮಂಗಳೂರು, ಎಪ್ರಿಲ್.16: ನೋಂದಣಿಗೊಳ್ಳದೆ ಸುರತ್ಕಲ್ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಖಾಸಗೀ ವೈದ್ಯರ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಕ್ಲಿನಿಕ್ ಗೆ ಬೀಗ ಜಡಿದಿದ್ದಾರೆ.
ಸುರತ್ಕಲ್ ನಲ್ಲಿದ್ದ ಶ್ರೀ ರಾಘವೇಂದ್ರ ಕ್ಲಿನಿಕ್ ಇದರ ನೋಂದಣಿ 2017ರಲ್ಲಿಯೇ ಮುಕ್ತಾಯವಾಗಿದ್ದು, ನಂತರ ನವೀಕರಣಗೊಳ್ಳದೆ ಕ್ಲಿನಿಕ್ ಕಾರ್ಯಾಚರಿಸುತ್ತಿತ್ತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯವರ ನಿರ್ದೇಶನದ ಮೇರೆಗೆ ಇಲಾಖೆಯ ಅಧಿಕಾರಿ ಡಾ.ಸಿಖಂದರ್ ಪಾಶಾ ಅವರು ಕ್ಲಿನಿಕ್ ಗೆ ದಾಳಿ ಮಾಡಿ, ಕ್ಲಿನಿಕನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ.
Comments are closed.