ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಕೇಂದ್ರ ಮಾರುಕಟ್ಟೆಯಲ್ಲಿ ಸಗಟು ತರಕಾರಿ ವ್ಯಾಪಾರಸ್ತರು ಎಪಿಎಂಸಿಯಲ್ಲೇ ವ್ಯಾಪಾರ ಮಾಡಬೇಕು. ಹಾಗೂ ಅಲ್ಲಿಂದಲೇ ಸಣ್ಣ ಪುಟ್ಟವ್ಯಾಪಾರಸ್ತರಿಗೆ ಪೂರೈಕೆ ಮಾಡುವ ಕುರಿತು ನಿಯಮ ಮಾಡಲಾಗಿದ್ದು, ಅದೇ ಪ್ರಕಾರ ಅದು ನಡೆಯುತ್ತಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಮುಂದಿನ 3 ತಿಂಗಳ ಮಟ್ಟಿಗೆ ಕೇಂದ್ರ ಮಾರುಕಟ್ಟೆ ಯಲ್ಲಿರುವ ಇತರ ಸಣ್ಣಪುಟ್ಟ ತರಕಾರಿ ಹಾಗೂ ಹಣ್ಣು ಹಂಪಲು ಮಾರಾಟಗಾರರಿಗೆ ವ್ಯಾಪಾರಕ್ಕಾಗಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಡುವ ಚಿಂತನೆಯಿದೆ. ಹಾಗೂ ತಕ್ಷಣಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಯಿಂದ ಸೋಮವಾರದಿಂದ ಸುಮಾರು 5.25 ಕೋಟಿ ಅಂದಾಜು ವೆಚ್ಚದಲ್ಲಿ ಬೀದಿ ಬದಿ ಕಾಯ್ದಿರಿಸಿ ಜಾಗದಲ್ಲಿ ಮತ್ತು ಅದರ ಬಳಿಯಿರುವ ಖಾಲಿ ಜಾಗದಲ್ಲಿ 400 ಅಂಗಡಿಗಳನ್ನು ನಿರ್ಮಾಣ ಮಾಡುವ ಕಾಮಗಾರಿಗಳು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸಣ್ಣ ತರಕಾರಿ ವ್ಯಾಪಾರಸ್ಥರು, ಹಣ್ಣು ಹಂಪಲು ವ್ಯಾಪಾರಸ್ಥರು, ಮಾಂಸ ವ್ಯಾಪಾರಸ್ಥರಿಗೆ ಮತ್ತು ಇನ್ನಿತರ ವ್ಯಾಪಾರಸ್ಥರನ್ನು ಅಲ್ಲಿಗೆ ಸ್ಥಳಾಂತರಿಸುವ ಕೆಲಸ ಕಾರ್ಯಗಳು ಆಗಲಿದೆ. ಆದರೆ ಮುಂದಿನ 3 ತಿಂಗಳ ಮಟ್ಟಿ ತರಕಾರಿ ಹಾಗೂ ಹಣ್ಣು ಹಂಪಲು ಮಾರಾಟಗಾರರಿಗೆ ಮಂಗಳೂರಿನ ಹೃದಯ ಭಾಗದಲ್ಲಿ ತಾತ್ಕಾಲಿಕವಾಗಿ ತಗಡಿನ ಶೀಟ್ ನಿಂದ ಶೆಡ್ ನಿರ್ಮಿಸಿ ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ ಖಾದರ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪೂರ್ಣಿಮಾ, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸ್ಥಳೀಯ ಬಿಜೆಪಿ ಮುಖಂಡರಾದ ಮುರಳೀಧರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
Comments are closed.