ಮಂಗಳೂರು : ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಕುಪ್ಪೆಪದವು ಕಿಲೆಂಜಾರು ಗ್ರಾಮದ ಕಟ್ಟೆಮಾರು,ಕಲ್ಲಾಡಿ ಹಾಗೂ ಇರುವೈಲು ಗ್ರಾಮದ ಪೂವಣಿಬೆಟ್ಟು ಪ್ರದೇಶದ ಪರಿಶಿಷ್ಟ ಜಾತಿ, ಪಂಗಡದ 38ಕುಟುಂಬಗಳಿಗೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಅವರಮನವಿ ಮೇರೆಗೆ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಅಧ್ಯಕ್ಷ ಎ. ಬಿ. ಶೆಟ್ಟಿ ಹಾಗೂ ಜಿಲ್ಲಾಚೇರ್‍ಮನ್ ಆಗಿರುವ ಸಿಎ ಶಾಂತಾರಾಮ ಶೆಟ್ಟಿ ಅವರು ಲಾಕ್‌ಡೌನ್‌ನಿಂದ ತೀವ್ರ ಸಮಸ್ಯೆಗೆಒಳಗಾದ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿಗೆ ಅವರ ಗ್ರಾಮಗಳಿಗೆ ತೆರಳಿ ಅಕ್ಕಿ, ದಿನಸಿಸೇರಿದಂತೆ ನಾನಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಪ್ರದೇಶದಲ್ಲಿ ನಲಿಕೆಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರಿಗೆ ಅಗತ್ಯ ವಸ್ತುಗಳ ತುರ್ತು ಅಗತ್ಯತೆಇರುವುದನ್ನು ಮನಗಂಡು ರೆಡ್‌ಕ್ರಾಸ್ ಈ ಸೇವೆ ಕೈಗೆತ್ತಿಕೊಂಡಿದೆ. ಜತೆಗೆ ಈಪ್ರದೇಶದಲ್ಲಿ ಮಾಸ್ಕ್‌ಗಳನ್ನು ಕೂಡ ವಿತರಿಸಲಾಯಿತು.
ಈ ಸಂದರ್ಭ ಜಿಲ್ಲಾ ರೆಡ್‌ಕ್ರಾಸ್‌ಘಟಕದ ಆಡಳಿತ ಮಂಡಳಿ ಸದಸ್ಯ ಹಾಗೂ ಸಾರ್ವಜನಿಕ ಸಂಪರ್ಕ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಬಿ. ರವೀಂದ್ರ ಶೆಟ್ಟಿ, ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.
Comments are closed.