ಮಂಗಳೂರು: ಶಕ್ತಿನಗರದ ಆಹಾರ ಪೂರೈಕೆ ಇಲಾಖೆಯ ಗೋದಾಮಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾತನಾಡಿದ ಶಾಸಕರು, ಆಹಾರ ಪೂರೈಕೆ ಇಲಾಖೆಯ ಗೋದಾಮಿಗೆ ತಂದಿದ್ದ ಅಕ್ಕಿಯಲ್ಲಿ ವ್ಯತ್ಯಾಸವಾಗಿರುವ ಕುರಿತು ಕರೆ ಬಂದ ಹಿನ್ನೆಲೆಯಲ್ಲಿ ತಕ್ಷಣವೇ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಹಾಗೂ ಅಕ್ಕಿಯ ಗುಣಮಟ್ಟದ ಕುರಿತು ಗೊಂದಲ ಉಂಟಾದ ಕಾರಣ ಬಂದಿದ್ದ ಅಕ್ಕಿಯನ್ನು ವಾಪಸ್ ಕಳಿಸಿಕೊಡಲಾಯಿತು ಎಂದು ಶಾಸಕರು ತಿಳಿಸಿದ್ದಾರೆ.
ಮಂಗಳೂರಿಗೆ ವಿತರಿಸಲು ಇಂದು ತಂದಿದ್ದ ಅಕ್ಕಿಯ ಗುಣಮಟ್ಟ ಉತ್ತಮವಾಗಿಲ್ಲ. ಈ ಅಕ್ಕಿಯನ್ನು ಮಂಗಳೂರಿನ ಜನತೆಗೆ ವಿತರಿಸಲು ಸಾಧ್ಯವಿಲ್ಲ. ಹಾಗಾಗಿ ಉತ್ತಮ ಗುಣಮಟ್ಟದ ಅಕ್ಕಿಯನ್ನು ತರಿಸಿ ಜನರಿಗೆ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ವಿಚಾರದಲ್ಲಿ ಯಾವುದೇ ಗೊಂದಲಗಳು ಬೇಡ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ತಂದಿದ್ದ ಅಕ್ಕಿಯನ್ನು ಲಾರಿಗಳಿಗೆ ತುಂಬಿಸಿ ವಾಪಸ್ ಕಳಿಸುವ ತನಕ ಶಾಸಕ ಕಾಮತ್ ಹಾಗೂ ಇತರರು ಸ್ಥಳದಲ್ಲಿಯೇ ಉಪಸ್ಥಿತರಿದ್ದು ಲಾರಿ ಅಲ್ಲಿಂದ ತೆರಳಿದ ಬಳಿಕವಷ್ಟೇ ಶಾಸಕರು ತೆರಳಿದ್ದಾರೆ.
ಈ ಸಂಧರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ಕಿಶೋರ್ ಕೊಟ್ಟಾರಿ, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ರೂಪಾ ಡಿ ಬಂಗೇರ, ಜೆ. ಸುರೇಂದ್ರ,ರಮೇಶ್ ಕಂಡೆಟ್ಟು, ಭಾಸ್ಕರ್ ಚಂದ್ರ ಶೆಟ್ಟಿ,ಅಜಯ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Comments are closed.