ಮಂಗಳೂರು : ಬಂಟ್ವಾಳ ಮೂಲದ ಕೊರೆನೋ ಪೀಡಿತ ಮಹಿಳೆಯ ಶವ ದಹನದ ಕುರಿತು ಬೋಳೂರು ಸ್ಮಶಾನ ಬಳಿ ಸಾರ್ವಜನಿಕರಿಗೆ ಗೊಂದಲ ನಿರ್ಮಾಣವಾಗಿದ್ದು ಸ್ಥಳಕ್ಕೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಸ್ಥಳೀಯ ಮನಪಾ ಸದಸ್ಯ ಜಗದೀಶ್ ಶೆಟ್ಟಿ ಬೋಳೂರು ತೆರಳಿ ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಕೋವಿಡ್ 19 ಸೋಂಕಿನಿಂದ ಬಂಟ್ವಾಳದ ಮಹಿಳೆ ಮೃತಪಟ್ಟ ಬಳಿಕ ಬೋಳೂರಿನ ವಿದ್ಯುತ್ ಚಾಲಿತ ಚಿತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಸಲಾಗಿತ್ತು. ಈ ಕುರಿತು ಸ್ಥಳೀಯರಲ್ಲಿ ಗೊಂದಲ ಉಂಟಾಗಿತ್ತು. ಹಾಗಾಗಿ ಮನಪಾ ಸದಸ್ಯ ಜಗದೀಶ್ ಶೆಟ್ಟಿ ಅವರೊಂದಿಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು ಎಂದಿದ್ದಾರೆ.
ಸಾರ್ವಜನಿಕರಲ್ಲಿ ಈ ಕುರಿತು ಒಂದು ಬಗೆಯ ಭೀತಿ ನಿರ್ಮಾಣವಾಗಿದೆ. ಆದರೆ ಈ ಕುರಿತು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅಂತ್ಯ ಸಂಸ್ಕಾರದ ಬಳಿಕ ಸ್ಯಾನಿಟೈಸರ್ ಸಿಂಪಡಣೆ ಮುಂತಾದ ಕಾರ್ಯಗಳನ್ನು ಮಾಡಿದ್ದೇವೆ.ಸಾರ್ವಜನಿಕರು ಭಯಗೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
Comments are closed.