ಮಂಗಳೂರು ಏಪ್ರಿಲ್ 24 : ಕರೋನಾ ನಿರ್ವಹಣೆಗೆ ಹಾಗೂ ಲಾಕ್‍ಡೌನ್ ಯಶಸ್ವಿಗೆ ತಾಲೂಕು ಪಂಚಾಯತ್ ಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದುಜಿಲ್ಲಾಉಸ್ತುವಾರಿಸಚಿವಕೋಟ ಶ್ರೀನಿವಾಸ ಪೂಜಾರಿ ಅವರು ಸೂಚಿಸಿದ್ದಾರೆ.
ಅವರು ಜಿಲ್ಲಾ ಪಂಚಾಯತ್‍ನಲ್ಲಿ ವೀಡಿಯೋಕಾನ್ಫೆರೆನ್ಸ್ ಮೂಲಕ ಜಿಲ್ಲೆಯತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಸ್ಥಳೀಯಾಡಳಿತ ಸಂಸ್ಥೆಗಳು ಕರೋನಾ ನಿರ್ವಹಣೆಗೆ ಸಮರೋಪಾಧಿಯಲ್ಲಿತೊಡಗಬೇಕು. ಗ್ರಾಮ ಪಂಚಾಯತ್‍ಗಳು ಜನರ ಮಧ್ಯೆಇರುವುದರಿಂದಅಲ್ಲಿನಶಂಕಿತ ರೋಗಿಗಳ ಹಾಗೂ ಕರೋನಾ ಪೀಡಿತರಜನರಎಲ್ಲಾ ಮಾಹಿತಿಇದ್ದು, ಜಾಗೃತಾವಸ್ಥೆಯಲ್ಲಿ ಕೆಲಸ ಮಾಡಿದರೆ, ಕರೋನಾ ನಿಯಂತ್ರಣ ಸಾಧ್ಯ. ಈ ಹಿನ್ನೆಲೆಯಲ್ಲಿತಾ.ಪಂ. ಹಾಗೂ ಗ್ರಾ.ಪಂ. ಪ್ರತಿನಿಧಿಗಳು ಶ್ರಮ ವಹಿಸಿ ದುಡಿಯಬೇಕುಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿಚರ್ಚೆಯ ನಂತರ 14ನೇ ಹಣಕಾಸಿನ ಅನುದಾನದಲ್ಲಿಕರೋನಾ ನಿಯಂತ್ರಣಕ್ಕೆ ಬೇಕಾದಯೋಜನೆರೂಪಿಸಲು ಸರಕಾರದಅನುಮತಿ ಸೇರಿದಂತೆ, ಕರೋನಾಜಾಗೃತಿಗೆ ಪ್ರತೀಗ್ರಾ.ಪಂ.ಗೆ ರೂ. 20 ಸಾವಿರದಂತೆಅನುದಾನ ನೀಡಲಾಗಿದೆ. ಇದನ್ನುಯಾವರೀತಿಖರ್ಚು ಮಾಡಬಹುದುಎಂಬುದರ ಸಮಗ್ರ ಮಾಹಿತಿ ಪಡೆದ ಸಚಿವರು, ಕರೋನಾ ನಿಯಂತ್ರಣಕ್ಕೆಎಲ್ಲರೂತಂಡವಾಗಿ ಕೆಲಸ ಮಾಡಬೇಕಿದೆಎಂದರು.
ಇದಲ್ಲದೆ, ಮುಂಬರುವ ಮಳೆಗಾಳದಲ್ಲಿ ಬರಬಹುದಾದ, ಡೆಂಗ್ಯು,ಮಲೇರಿಯಾ, ಇಲಿಜ್ವರ ಮತ್ತಿತರ ಕಾಯಿಲೆಗಳ ಬಗ್ಗೆ ಜಾಗೃತರಾಗಬೇಕುಎಂದು ಸಚಿªವ ಕೋಟ ಸೂಚಿಸಿದರು.
ಸುಳ್ಯ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕು ಪಂಚಾಯತ್‍ಅಧ್ಯಕ್ಷ, ಉಪಾಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ತಾಲೂಕುಗಳಲ್ಲಿ ನಡೆಯುತ್ತಿರುವಕರೋನಾಕಾರ್ಯಕ್ರಮಗಳ ಮಾಹಿತಿ ನೀಡಿದರು.
Comments are closed.