ಮಂಗಳೂರು. ಎಪ್ರಿಲ್. 27: ಮಂಗಳೂರಿನಲ್ಲಿ ಸೋಮವಾರ ಮತ್ತೆ ಇಬ್ಬರಲ್ಲಿ ಕೋವಿಡ್ – 19 (ಕೊರೋನ) ಸೋಂಕು ಪತ್ತೆಯಾಗಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಲಶೇಖರದ ನಿವಾಸಿಗಳಿಬ್ಬರಲ್ಲಿ ಕೋವಿಡ್ – 19 (ಕೊರೋನ) ಸೋಂಕುದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ನಗರದ ಪಡೀಲ್ ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಲಶೇಖರ ಸಮೀಪದ ಶಕ್ತಿನಗರದ 80 ವರ್ಷದ ಮಹಿಳೆ ಹಾಗೂ ಅವರ 45 ವರ್ಷದ ಮಗನ ಗಂಟಲು ದ್ರವ ಪರೀಕ್ಷೆಯ ವರದಿಗಳು ಇಂದು ಸ್ವೀಕೃತವಾಗಿದ್ದು, ವರದಿ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಕುಲಶೇಖರ -ಶಕ್ತಿನಗರದ ಅವರ ಮನೆಯ ಸುತ್ತ ಮುತ್ತ ಸೀಲ್ ಡೌನ್ ಮಾಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ವ್ಯಕ್ತಿಗಳಲ್ಲಿ ಕೋವಿಡ್ – 19 (ಕೊರೋನ) ಸೋಂಕುದೃಡುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 21ಕ್ಕೇರಿದೆ.
Comments are closed.