ಮಂಗಳೂರು ಏಪ್ರಿಲ್ 29 : ಉಸಿರಾಟದ ತೊಂದರೆ, ಜ್ವರ, ಕೆಮ್ಮು ಈ ರೀತಿಯ ರೋಗಲಕ್ಷಣಗಳನ್ನು ಹೊಂದಿದವರಿಗೆ ಕರ್ನಾಟಕ ಸರಕಾರವು ದೂರವಾಣಿ ಮೂಲಕ ಸಲಹೆ ನೀಡಲು ಸಹಾಯವಾಣಿ ಆರಂಭಿಸಿದೆ. .
ಕರ್ನಾಟಕ ಸರಕಾರದ ಆಪ್ತಮಿತ್ರ ಸಹಾಯವಾಣಿ 14410 ಸಂಖ್ಯೆಗೆ ಕಾಲ್ ಮಾಡಿದರೆ ವೈದ್ಯರು ಸೂಕ್ತ ಸಲಹೆ ನೀಡಲಿದ್ದಾರೆ. ಇದು ಸರಕಾರದ ಟೆಲಿಮಿಡಿಸಿನ್ ಮತ್ತು ವೈದ್ಯಕೀಯ ಸಲಹಾ ಸೇವೆ ಆಗಿರುತ್ತದೆ. ಅಗತ್ಯವಿರುವವರು ಆಪ್ತಮಿತ್ರ ಸಹಾಯವಾಣಿಗೆ ಕರೆ ಮಾಡಲು ಪ್ರಕಟಣೆ ತಿಳಿಸಿದೆ.
Comments are closed.