ಮಂಗಳೂರು, ಎಪ್ರಿಲ್.30: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಮತ್ತಿಬ್ಬರಲ್ಲಿ ಕೊರೋನ ಪಾಸಿಟಿವ್ ದೃಢಗೊಂಡಿದೆ . ಕೊರೋನಾ ಹಾಟ್ ಸ್ಪಾಟ್ ಆದ ಫಸ್ಟ್ ನ್ಯೂರೋ ಆಸ್ಪತ್ರೆ ಸಂಪರ್ಕದಿಂದ ಬಂಟ್ವಾಳ ಹಾಗೂ ಮಂಗಳೂರಿನ ಇಬ್ಬರಲ್ಲಿ ಕೊರೋನ ಸೋಂಕು ದೃಢಗೊಂಡಿದೆ.
ಬಂಟ್ವಾಳದ 69 ವರ್ಷದ ವೃದ್ಧ ಮತ್ತು ಬೋಳೂರು ನ್ಯಾಶನಲ್ ನ 62 ವರ್ಷದ ವೃದ್ದನಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಬಂಟ್ವಾಳ ಮೂಲದ ವ್ಯಕ್ತಿ ರೋಗಿ ಸಂಖ್ಯೆ 309 ರ ದ್ವಿತೀಯ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದ್ದು, ಮತ್ತೊಬ್ಬರು ರೋಗಿ ಸಂಖ್ಯೆ536 ರ ನೇರ ಸಂಪರ್ಕ ಹೊಂದಿದ್ದರು.
ಪಾಸಿಟಿವ್ ದೃಢಪಟ್ಟವರಲ್ಲಿ ಒಬ್ಬರು ಎ.19 ರಂದು ಕೊರೋನಕ್ಕೆ ಬಲಿಯಾದ ಮಹಿಳೆಯ ಸಂಬಂಧಿ ಹಾಗೂ ನೆರೆಮನೆಯವರಾಗಿರುವ ಬಂಟ್ವಾಳದ 69 ವರ್ಷದ ವೃದ್ದ ಹಾಗೂ ಮತ್ತೊಬ್ಬರು ನಗರದ ಬೋಳೂರು ನ್ಯಾಶನಲ್ ನ ನಿವಾಸಿ, ನಿನ್ನೆ ಪಾಸಿಟಿವ್ ಆದ ಮಹಿಳೆಯ 63 ವರ್ಷದ ಪತಿ. ದ.ಕ. ಜಿಲ್ಲೆಯಲ್ಲಿ ಪತ್ತೆಯಾದ 24ನೇ ಪಾಸಿಟಿವ್ ಪ್ರಕರಣವಾಗಿದೆ. ಇವರಿಬ್ಬರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
Comments are closed.